Select Your Language

Notifications

webdunia
webdunia
webdunia
webdunia

ಸಹೋದರಿಯರ ಕಾದಾಟ..? ತಂಗಿಗೆ ಬೆಂಕಿ ಹಚ್ಚಿ ಅಕ್ಕ!

ಸಹೋದರಿಯರ ಕಾದಾಟ..? ತಂಗಿಗೆ ಬೆಂಕಿ ಹಚ್ಚಿ ಅಕ್ಕ!
ತೆಲಂಗಾಣ , ಗುರುವಾರ, 3 ಫೆಬ್ರವರಿ 2022 (15:17 IST)
ದಾಯವಾದಿ ಕಲಹ ಹೊಸದಲ್ಲ. ಆಸ್ತಿ, ದುಡ್ಡಿಗಾಗಿ ದಾಯಾದಿಗಳ ಮಧ್ಯೆ ಹೊಡೆದಾಟ, ಕೊಲೆಯಂಥ ಕೃತ್ಯಗಳು ನಡೆಯುತ್ತಿರುತ್ತವೆ.

ಹೆಚ್ಚಾಗಿ ಇಂಥದ್ದನ್ನೆಲ್ಲ ಮಾಡಿ ಸಿಕ್ಕಿಬೀಳುವವರು ಪುರುಷರು. ಆದರೆ ತೆಲಂಗಾಣದ ಮೇದಕ್ ಜಿಲ್ಲೆಯ ವಾಡಿಯಾರಾಮ್ ಗ್ರಾಮದಲ್ಲಿ ಮಹಿಳೆಯೊಬ್ಬಳು ಇಂಥ ದುಷ್ಕೃತ್ಯ ನಡೆಸಿದ್ದಾರೆ.  ರಾಜೇಶ್ವರಿ  ಎಂಬಾಕೆ  ಆಸ್ತಿಗಾಗಿ ತನ್ನ ಸಹೋದರಿಗೇ ಬೆಂಕಿ ಹಚ್ಚಿ ಕೊಂದಿದ್ದಾಳೆ. 

ಮೃತ ಮಹಿಳೆ ಹೆಸರು ವರಲಕ್ಷ್ಮೀ ಎಂದಾಗಿದ್ದು, ಆಕೆಗೆ 36ವರ್ಷ.ವರಲಕ್ಷ್ಮೀ ಎಂಬಾಕೆ ವಾಡಿಯಾರಾಮ್ ಗ್ರಾಮದಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಆಕೆಯ ಪತಿ ಕೆಲವು ವರ್ಷಗಳ ಹಿಂದೆಯೇ ದೂರಾವಾಗಿದ್ದಾರೆ.

ಈಕೆಗೆ ರಾಜೇಶ್ವರಿ ಎಂಬ ತಂಗಿ ಇದ್ದು, ಅವಳೂ ವಿಚ್ಛೇದಿತಳು.  ಇವರಿಬ್ಬರೂ ಸ್ವಂತ ಅಕ್ಕ-ತಂಗಿಯರಾಗಿದ್ದು, ಕಾಮರೆಡ್ಡಿ ಜಿಲ್ಲೆಯಲ್ಲಿ ತವರು ಮನೆಯಿದೆ. ಈ ಸಹೋದರಿಯರ ಪಾಲಕರ ಬಳಿ 5 ಎಕರೆಗಳಷ್ಟು ಭೂಮಿಯಿದೆ. ಆ ಐದು ಎಕರೆ ಭೂಮಿ ಹಂಚಿಕೊಳ್ಳುವ ಸಂಬಂಧ ವರಲಕ್ಷ್ಮೀ ಮತ್ತು ರಾಜೇಶ್ವರಿ ಮಧ್ಯೆ ವಿದಾದ ಇತ್ತು ಎಂದು ಚೆಗುಂಟಾ ಪೊಲೀಸರು ತಿಳಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಭೇಟಿ ಮಾಡಿದ ಆನಂದ್​ಸಿಂಗ್