ಗಾಂಧೀನಗರ : ಇನ್ಸ್ಟಾಗ್ರಾಮ್ನಲ್ಲಿ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಆರೋಪದಡಿ 28 ವರ್ಷದ ವ್ಯಕ್ತಿ ಮೇಲೆ ಗುಜರಾತ್ ಪೊಲೀಸರು ದೂರು ದಾಖಲಿಸಿದ್ದಾರೆ.
ಗುಜರಾತ್ನ ಆನಂದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬುಧವಾರ ಮಹಿಳೆ ಪೊಲೀಸರಿಗೆ ದೂರು ನೀಡಿದ ಬಳಿಕ ವಿಷಯ ಬೆಳಕಿಗೆ ಬಂದಿದೆ. ಮಹಿಸಾಗರ್ ಜಿಲ್ಲೆಯ ದೇಬಾರ್ ಗ್ರಾಮದ ವ್ಯಕ್ತಿ 2019ರ ನವೆಂಬರ್ನಲ್ಲಿ ಆನಂದ್ ಜಿಲ್ಲೆಯ ಉಮ್ರೆತ್ ತಾಲೂಕಿನ 27 ವರ್ಷದ ಮಹಿಳೆಯನ್ನು ವಿವಾಹವಾಗಿದ್ದನು.
ನಂತರ ಈ ಕುರಿತಂತೆ ಮಹಿಳೆ ಕುಟುಂಬಕ್ಕೆ ಮಾಹಿತಿ ನೀಡಿ, ದೂರು ದಾಖಲಿಸಲು ಪೊಲೀಸ್ ಠಾಣೆಯ ಮೆಟ್ಟಿಲೇರಿರುವುದಾಗಿ ಚೇತನ್ ಸಿಂಗ್ ರಾಥೋಡ್ ಹೇಳಿದ್ದಾರೆ. ಇದೀಗ ಈ ಕುರಿತಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.