ನಾಳೆ ವಿಧಾನಸಭಾ ಚುನಾವಣೆ ಹಿನ್ನೆಲೆ ಬೆಳಗ್ಗೆ 7ರಿಂದ ಸಂಜೆ 6.30ರ ವರೆಗೂ ಮತದಾನ ಪ್ರಕ್ರಿಯೆ ನಡೆಯಲಿದೆ.ಮತದಾನ ಪ್ರಕ್ರಿಯೆಗೂ ಮುನ್ನ ಸಕಲ ತಯಾರಿಮಾಡಿಕೊಂಡಿದ್ದು,ಸಿಬ್ಬಂದಿಗಳಿಗೆ ಚುನಾವಣಾ ಪ್ರಕ್ರಿಯೆ ಬಗ್ಗೆ ತರಬೇತಿ ನೀಡಲಾಗಿದೆ.PRO, APRO, PO-1, PO-2 ಒಂದು ಮತಗಟ್ಟೆಯಲ್ಲಿ ನಾಲ್ಕು ಜನರ ತಂಡ ರಚನೆ ಮಾಡಲಾಗಿದೆ.ಪೋಲಿಂಗ್ ಸ್ಟೇಷನ್ ಪ್ರೊಸೀಜರ್ ಬಗ್ಗೆ ಪಾಠ ಮಾಡಿದ್ದು,ಮತದಾನ ಮುಗಿದ ಬಳಿಕ ಸೀಲಿಂಗ್ ಪ್ರೊಸೀಜರ್ ಬಗ್ಗೆಯೂ ಮಾಹಿತಿ ನೀಡಿದ್ದು,ಇವಿಎಂ, ವಿವಿ ಪ್ಯಾಟ್ ಕನೆಕ್ಟ್ ಮಾಡುವ ತಯಾರಿ ಮಾಡಲಾಗಿದೆ.ಮತದಾನ ಪ್ರಕ್ರಿಯೆ ಬಗ್ಗೆ ಚುನಾವಣಾ ಆಯೋಗ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.
ಬೆಳಗ್ಗೆ 5.30ಕ್ಕೆ ಮಾಕ್ ಪೋಲ್.7 ಗಂಟೆಗೆ ಮತದಾನ ಮಾಡೋ ಮೊದಲು ಮಾಕ್ ಪೋಲ್.ಮತ ಸರಿಯಾಗಿ ಆಗ್ತಿದೆಯಾ ಇಲ್ವಾ ಅಂತ ಪರಿಶೀಲನೆ ಮಾಡಬೇಕು.ಇಡೀ ಪ್ರಕ್ರಿಯೆ ಬಗ್ಗೆ ಸಿಬ್ಬಂದಿಗಳಿಗೆ ವಿವರಣೆ ನೀಡಲಾಗಿದೆ.