Select Your Language

Notifications

webdunia
webdunia
webdunia
webdunia

ಹಿಂದೂ ಧರ್ಮದಲ್ಲಿನ ಎಲ್ಲಾ ಹಬ್ಬಗಳು ಪರಿಸರಸ್ನೇಹಿ ಮತ್ತು ಮಾನವರಿಗೆ ಹಿತಕಾರಿ

ಹಿಂದೂ ಧರ್ಮದಲ್ಲಿನ ಎಲ್ಲಾ ಹಬ್ಬಗಳು ಪರಿಸರಸ್ನೇಹಿ ಮತ್ತು ಮಾನವರಿಗೆ ಹಿತಕಾರಿ
bangalore , ಬುಧವಾರ, 3 ನವೆಂಬರ್ 2021 (22:12 IST)
ಹಿಂದೂ ಧರ್ಮದಲ್ಲಿನ ಎಲ್ಲಾ ಹಬ್ಬಗಳು, ಉತ್ಸವಗಳು ಮತ್ತು ವ್ರತಗಳು ಪರಿಸರಸ್ನೇಹಿ ಮತ್ತು ಮಾನವರಿಗೆ ಹಿತಕಾರಿ ಆಗಿರುತ್ತದೆ; ಆದರೆ ಕಮ್ಯುನಿಸ್ಟರು (ಸಾಮ್ಯವಾದಿಗಳು), ಜಿಹಾದಿಗಳು, ಮಿಷನರಿಗಳು, ಸಿನಿಮಾ ನಟರು, ಜಾತ್ಯತೀತರು ಮತ್ತು ನಾಸ್ತಿಕರು ಉದ್ದೇಶಪೂರ್ವಕವಾಗಿ ಹಿಂದೂ ಧರ್ಮವನ್ನು ಗುರಿಯಾಗಿಟ್ಟುಕೊಂಡು ಚಳುವಳಿಗಳನ್ನು ನಡೆಸುತ್ತಿದ್ದಾರೆ. 'ಪಿಕೆ' ಚಲನಚಿತ್ರದಲ್ಲಿ ನಟ ಅಮೀರ್ ಖಾನ್, 'ಕಲ್ಲು (ಶಿವಲಿಂಗ) ಹಾಲು ಕುಡಿಯುವುದಿಲ್ಲ, ಬಡವರಿಗೆ ಕೊಡಿ', ಎನ್ನುತ್ತಾನೆ; ಆದರೆ ಆತ 'ಸತ್ತವರಿಗೆ ಚಳಿ ಆಗುವುದಿಲ್ಲ, ಹಾಗಾದರೆ ಮಜಾರ್(ಗೋರಿಗಳ) ಮೇಲೆ ಚಾದರ ಏಕೆ ಹೊದಿಸಬೇಕು ? ಬಡವರಿಗೆ ನೀಡಿ', ಎಂದು ಏಕೆ ಹೇಳುವುದಿಲ್ಲ ? ಹೋಳಿ ಬಂತೆಂದರೆ, 'ನೀರನ್ನು ಉಳಿಸಿ', ದೀಪಾವಳಿ ಬಂತೆಂದರೆ 'ವಾಯು ಮಾಲಿನ್ಯ ತಡೆಗಟ್ಟಿ', ಎಂದು ಪ್ರತಿ ಹಬ್ಬದಲ್ಲಿ ಪ್ರಸಾರವಾಗುತ್ತದೆ. 'ಪೇಟಾ' (PETA)ದವರು, 'ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸಬೇಡಿ; ಏಕೆಂದರೆ ಗಾಳಿಪಟದಿಂದ ಪಕ್ಷಿಗಳು ಸಾಯುತ್ತವೆ' ಎನ್ನುತ್ತಾರೆ. ಆದರೆ, ವರ್ಷವಿಡೀ ಮೊಬೈಲ್ ಫೋನ್ ಬಳಕೆಯಿಂದ ಅತಿ ಹೆಚ್ಚು ಪಕ್ಷಿಗಳು ಸಾಯುತ್ತವೆ. ಅವರು ಅದರ ಬಗ್ಗೆ ಏಕೆ ಮಾತನಾಡುವುದಿಲ್ಲ ? 
 
 
ಬೆಂಗಳೂರು: ಜಾಹೀರಾತುಗಳ ಮೂಲಕ ಅಪಪ್ರಚಾರ ಹರಡುವವರ ಮೇಲೆ ಆರ್ಥಿಕ ಬಹಿಷ್ಕಾರ ಹಾಕಬೇಕು. ಹೀಗೆ ಮಾಡಿದರೆ ಹಿಂದೂ ಧರ್ಮವನ್ನು ಯಾರೂ ವಕ್ರದೃಷ್ಟಿಯಿಂದ ನೋಡುವುದಿಲ್ಲ ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಚೇತನ ರಾಜಹಂಸ ಪ್ರತಿಪಾದಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಡೆಯುವ ಹಿಂದೂ ಹಬ್ಬಗಳ ಅಪಪ್ರಚಾರ ಮತ್ತು ಹಬ್ಬಗಳ ಪ್ರಸ್ತುತ ವಿಷಯದ ಕುರಿತು ನಡೆದ ವಿಶೇಷ 'ಆನ್‌ಲೈನ್' ಚರ್ಚಾಕೂಟದಲ್ಲಿ ಅವರು ಮಾತನಾಡಿದರು, ಹಿಂದೂಗಳ ಸಂಘಟಿತರಾಗಿ ಹಿಂದೂ ಧರ್ಮವಿರೋಧಕರ ಆಕ್ಷೇಪಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸೈದ್ಧಾಂತಿಕವಾಗಿ ಖಂಡಿಸಬೇಕು.
ಜಯಪುರದ ಜ್ಞಾನಂ ಫೌಂಡೇಶನ್ ನ ಸಂಸ್ಥಾಪಕ ದೀಪಕ ಗೋಸ್ವಾಮಿ ಮಾತನಾಡಿ, ಚಲನಚಿತ್ರಗಳಲ್ಲಿಯೂ ಹಿಂದೂ ಧರ್ಮವನ್ನು ಉದ್ದೇಶಿಸಲಾಗುತ್ತಿದೆ. ಅರ್ಚಕರನ್ನು ಅಚಾರಿಕವಾಗಿ ಬಿಂಬಿಸಲಾಗುತ್ತಿದ್ದು, ಕುಖ್ಯಾತ ಗೂಂಡಾನನ್ನು 'ಜಯಭವಾನಿ' ಎಂದು ಹೇಳಿ ಭಕ್ತನಂತೆ ಬಿಂಬಿಸಲು ಸಾಧ್ಯವಾಯಿತು. ಇದರಿಂದ ಹಿಂದೂಗಳು ಗೊಂದಲಕ್ಕೀಡಾಗಿ ಧರ್ಮದಿಂದ ದೂರ ಸರಿಯುತ್ತಾರೆ. ಹಿಂದೂಗಳಿಗೆ ಧರ್ಮದ ಬಗ್ಗೆ ಯೋಗ್ಯ ಶಿಕ್ಷಣವನ್ನು ನೀಡಿದರೆ, ಅವರು ಇಂತಹ ಅಪಪ್ರಚಾರಕ್ಕೆ ಬಲಿಯಾಗುವುದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಸೋಲಿಸಲು ಕುತಂತ್ರ