Select Your Language

Notifications

webdunia
webdunia
webdunia
webdunia

ದಸರಾ, ದೀಪಾವಳಿ ಹಬ್ಬದ ಪ್ರಯಾಣಕ್ಕೆ 18 ವಿಶೇಷ ರೈಲು ಸೇವೆ

ದಸರಾ, ದೀಪಾವಳಿ ಹಬ್ಬದ ಪ್ರಯಾಣಕ್ಕೆ 18 ವಿಶೇಷ ರೈಲು ಸೇವೆ
ಬೆಂಗಳೂರು , ಬುಧವಾರ, 15 ಸೆಪ್ಟಂಬರ್ 2021 (10:20 IST)
ಬೆಂಗಳೂರು, ಸೆ15 : ಭಾರತದಲ್ಲಿ ಹಬ್ಬಗಳು ಸಮೀಪಿಸಿದಾಗ ಜನರು ಉದ್ಯೋಗ ಮಾಡುವ ಸ್ಥಳದಿಂದ ತವರೂರಿನ ಕಡೆಗೆ ಪ್ರಯಾಣ ಮಾಡುವುದು ಹೆಚ್ಚುತ್ತದೆ.ಜೀವನಕ್ಕಾಗಿ ಭಾರತದಲ್ಲಿ ಒಂದೂರಿನ ಜನರು ನಗರ ಪ್ರದೇಶದಲ್ಲಿ ಕೆಲಸ ಮಾಡುವುದು ಸಾಮಾನ್ಯವಾಗಿದೆ. ಹಬ್ಬಗಳ ಆಚರಣೆಗಾಗಿ ಎಲ್ಲೇ ಉದ್ಯೋಗ ಮಾಡುತ್ತಿದ್ದರೂ ಮತ್ತೆ ಸ್ವಂತ ಊರಿನ ಕಡೆಗೆ ಹೋಗಿ ಸಮಯ ಕಳೆಯುವ ಆಸೆ ಬಹುತೇಕ ಎಲ್ಲಾ ಜನರದ್ದಾಗಿರುತ್ತದೆ.

ಹೀಗಾಗಿ ಹಬ್ಬದ ವಿಶೇಷ ಎಂದು ಹೆಚ್ಚು ರೈಲು ಸಂಚಾರ ನಡೆಸುವುದು ಕೂಡ ಇರುತ್ತದೆ. ಹೇಗೆ ವಿಶೇಷ ಸಂದರ್ಭಗಳಲ್ಲಿ ಹೆಚ್ಚು ಬಸ್ ಸಂಚಾರ, ಪ್ರಯಾಣಿಕರ ದಟ್ಟಣೆ ಇರುತ್ತದೋ ರೈಲು ಸಂಚಾರಕ್ಕೆ ಕೂಡ ಹೆಚ್ಚಿನ ವ್ಯವಸ್ಥೆ ಮಾಡಿರಲಾಗುತ್ತದೆ. ಸೌತ್ ಸೆಂಟ್ರಲ್ ರೈಲ್ವೇ ಹಬ್ಬದ ಸಂಭ್ರಮಕ್ಕೆ 18 ವಿಶೇಷ ರೈಲು ಸೇವೆ ನೀಡುವ ಬಗ್ಗೆ ಭಾರತೀಯ ರೈಲ್ವೆ ತಿಳಿಸಿದೆ.
ಇನ್ನು ಮುಂದೆ ಹಬ್ಬಗಳು ಸಾಲು ಸಾಲಾಗಿ ಎದುರುಗೊಳ್ಳುತ್ತಿವೆ. ಈ ವರ್ಷದ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಹಬ್ಬಗಳು ಈಗಾಗಲೇ ಮುಗಿದಿವೆ. ಇನ್ನು ನವರಾತ್ರಿ ಹಾಗೂ ದೀಪಾವಳಿ ಹಬ್ಬಗಳು ಬರಲಿದ್ದು, ದೇಶದ ಎಲ್ಲೆಡೆ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಾಗಿವೆ. ನವರಾತ್ರಿಯ 9 ದಿನಗಳಲ್ಲಿ ವಿವಿಧ ದೇವತೆಗಳ ಆರಾಧನೆ ನಡೆಯುತ್ತದೆ. ಭಾರತದ ಉತ್ತರ, ದಕ್ಷಿಣ, ಈಶಾನ್ಯ ಭಾಗದಲ್ಲಿ ಕೂಡ ನವರಾತ್ರಿ ಆಚರಣೆ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ.
ದಸರಾ, ದೀಪಾವಳಿ ಸಂಭ್ರಮದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಜಾತಿ, ಮತ, ಬೇಧ ಇಲ್ಲದೆ ಎಲ್ಲೆಡೆ ಸಡಗರ ಸಂಭ್ರಮದಿಂದ ದೀಪಾವಳಿ ಆಚರಿಸಲಾಗುತ್ತದೆ. ಉದ್ಯೋಗ ಹುಡುಕಿಕೊಂಡು ಎಲ್ಲೇ ಹೋಗಿದ್ದರೂ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಲು ಎಲ್ಲರೂ ಮನೆಗೆ ಬಂದು ಕೂಡುತ್ತಾರೆ, ಹಬ್ಬದ ಆಚರಣೆಯಲ್ಲಿ ತೊಡಗಿರುತ್ತಾರೆ.
ಈ ಎಲ್ಲಾ ಕಾರಣಗಳಿಂದ ಹೆಚ್ಚುವರಿ ರೈಲು ಸೇವೆಯನ್ನು ಕೂಡ ಒದಗಿಸಲಾಗಿದೆ. ಸೌತ್ ಸೆಂಟ್ರಲ್ ರೈಲ್ವೇ ಹಬ್ಬದ ಸಂಭ್ರಮಕ್ಕೆ ವಿಶೇಷ ರೈಲು ಸೇವೆಗಳನ್ನು ಒದಗಿಸಲು ಸಿದ್ಧವಾಗಿದೆ. ಒಟ್ಟು ವಿಶೇಷ 18 ರೈಲುಗಳು ಸಂಚಾರ ಮಾಡಲಿವೆ.
ಬಹುತೇಕ ರೈಲುಗಳು ಸೆಪ್ಟೆಂಬರ್ 28ರಿಂದ ಆರಂಭವಾಗಿ ಈ ವರ್ಷದ ಅಂತ್ಯದ ವರೆಗೂ ಸಂಚಾರ ನಡೆಸಲಿವೆ. ಈ ಎಲ್ಲಾ ರೈಲು ಸೇವೆಗಳು ಸಂಪೂರ್ಣ ರಿಸರ್ವ್ಡ್ ಆಗಿರಲಿವೆ. ಈ ಬಗ್ಗೆ ಸೌತ್ ಸೆಂಟ್ರಲ್ ರೈಲ್ವೇ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಯಾವ ಸ್ಥಳಗಳಿಗೆ ವಿಶೇಷ ರೈಲು ಸೇವೆ? ಪಟ್ಟಿ ಇಲ್ಲಿದೆ
ಹೌರಾ- ಹೈದರಾಬಾದ್
ಹೈದರಾಬಾದ್- ಹೌರಾ
ಶಾಲಿಮಾರ್- ಸಿಕಂದರಾಬಾದ್
ಸಿಕಂದರಾಬಾದ್- ಶಾಲಿಮಾರ್
ಹಟಿಯಾ- ಯಶವಂತಪುರ
ಯಶವಂತಪುರ- ಹಟಿಯಾ
ಹೌರಾ- ಮೈಸೂರು
ಮೈಸೂರು- ಹೌರಾ
ಹೌರಾ- ಯಶವಂತಪುರ
ಯಶವಂತಪುರ- ಹೌರಾ
ಹೌರಾ- ವಾಸ್ಕೊ ಡ ಗಾಮ
ವಾಸ್ಕೊ ಡ ಗಾಮ- ಹೌರಾ
ಹೌರಾ- ಪುದುಚೆರಿ
ಪುದುಚೆರಿ- ಹೌರಾ
ಹೌರಾ- ಎರ್ನಾಕುಲಂ
ಎರ್ನಾಕುಲಂ- ಹೌರಾ
ಹಟಿಯಾ- ಬೆಂಗಳೂರು ಕಂಟೋನ್ಮೆಂಟ್
ಬೆಂಗಳೂರು ಕಂಟೋನ್ಮೆಂಟ್- ಹಟಿಯಾ


Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣ ಪ್ರಶ್ನಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್