ಉತ್ತರ ಪ್ರದೇಶ : ಕೊರೊನಾ ನಡುವೆ ದೇಶದಲ್ಲಿ ಡೆಂಗ್ಯೂ ಪ್ರಕರಣಗಳು ಸಹ ಹೆಚ್ಚಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿದ್ದು ಡೆಂಗ್ಯೂಗೆ ಇನ್ನೂ ಇಬ್ಬರು ಬಲಿಯಾಗಿದ್ದಾರೆ.
ಇದನ್ನು ಸೇರಿ ಉತ್ತರ ಪ್ರದೇಶದಲ್ಲಿ ವೈರಲ್ ಜ್ವರದಿಂದ ಸಾವನ್ನಪ್ಪಿದವರ ಸಂಖ್ಯೆ ಸೋಮವಾರ 60 ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡೆಂಗ್ಯೂಗೆ 14 ವರ್ಷದ ಹುಡುಗಿ ವೈದ್ಯಕೀಯ ಕಾಲೇಜಿನಲ್ಲಿ ಸಾವನ್ನಪ್ಪಿದ್ದಾರೆ, ಆದರೆ ಇನ್ನೊಂದು ಮಗು ಆಸ್ಪತ್ರೆಗೆ ಕರೆತೆರುವ ಮುನ್ನವೇ ಸಾವನ್ನಪ್ಪಿತ್ತು ಎಂದು ಅಗರ್ ಪ್ರದೇಶದ ಆರೋಗ್ಯ ವಿಭಾಗದ ಹೆಚ್ಚುವರಿ ನಿರ್ದೇಶಕರಾದ ಎಕೆ ಸಿಂಗ್ ತಿಳಿಸಿದ್ದಾರೆ . ಇನ್ನು ಬಾಲಕಿಯ ಸಾವಿನ ನಂತರ, ಆಕೆಯ ಸಹೋದರಿ ವಿಭಾಗೀಯ ಆಯುಕ್ತರಾದ ಅಮಿತ್ ಗುಪ್ತಾ ಅವರ ವಾಹನದ ಮುಂದೆ ಕುಳಿತು ಪ್ರತಿಭಟನೆ ಮಾಡಲು ಆರಂಭಿಸಿದ್ದರು, ಆದರೆ ನಂತರ ಅಧಿಕಾರಿಗಳು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ.
ಈ ಮಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್, ಚಂದ್ರ ವಿಜಯ್ ಸಿಂಗ್ ಅವರು ಲ್ಯಾಬ್ಗಳು ವರದಿ ನೀಡಲು ಅಧಿಕ ಶುಲ್ಕ ವಿಧಿಸುವ ಕುರಿತು ಪತ್ರಿಕೆ ವರದಿಗಳನ್ನು ಗಮನದಲ್ಲಿಟ್ಟುಕೊಂಡು, ತೆಗೆದುಕೊಳ್ಳಬೇಕಾದ ದರಗಳ ಬಗ್ಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ನೀಡಿದ್ದಾರೆ. ಆಗ್ರಾದಿಂದ 50 ಕಿಮೀ ಮತ್ತು ಲಕ್ನೋದಿಂದ 320 ಕಿಮೀ ದೂರದಲ್ಲಿರುವ ಫಿರೋಜಾಬಾದ್ ಕಳೆದ ಮೂರು ವಾರಗಳಿಂದ ಡೆಂಗ್ಯೂ ಮತ್ತು ಮಾರಣಾಂತಿಕ ವೈರಲ್ ಜ್ವರ ಹೆಚ್ಚಾಗುತ್ತಿದ್ದು, ಮಕ್ಕಳು ಬಲಿಯಾಗುತ್ತಿದ್ದಾರೆ.