Select Your Language

Notifications

webdunia
webdunia
webdunia
webdunia

Alert : ಲಾಕ್ ಡೌನ್ ನಲ್ಲಿ ಪೊಲೀಸರು ಬಳಸ್ತಿದ್ದಾರೆ ಗುಪ್ತ ಕ್ಯಾಮೆರಾ

Alert : ಲಾಕ್ ಡೌನ್ ನಲ್ಲಿ ಪೊಲೀಸರು ಬಳಸ್ತಿದ್ದಾರೆ ಗುಪ್ತ ಕ್ಯಾಮೆರಾ
ದಾವಣಗೆರೆ , ಭಾನುವಾರ, 19 ಏಪ್ರಿಲ್ 2020 (15:18 IST)
ಲಾಕ್ ಡೌನ್ ದೇಶಾದ್ಯಂತ ಜಾರಿಯಲ್ಲಿರುವುದರಿಂದ ಪೊಲೀಸರು ಗುಪ್ತಾ ಕ್ಯಾಮೆರಾಗಳಿಗೆ ಮೊರೆ ಹೋಗಿದ್ದಾರೆ.
 

ದಾವಣಗೆರೆ ನಗರದಲ್ಲಿ ಅನಾವಶ್ಯಕವಾಗಿ ವಾಹನ ಮತ್ತು ಜನರ ಸಂಚಾರ ಓಡಾಟ ತಪ್ಪಿಸಲು ಆಯಾಕಟ್ಟಿನ ಸ್ಥಳಗಳಲ್ಲಿ ಗುಪ್ತ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.

ಬಹಳಷ್ಟು ಸಾರ್ವಜನಿಕರು ಅದರಲ್ಲೂ ಯುವಕರು ಕೋವಿಡ್ ನಿಯಂತ್ರಣಕ್ಕೆ ವಿಧಿಸಲಾದ ಲಾಕ್ ಡೌನ್ ಗೆ ಸ್ಪಂದಿಸದೆ ಕೆಲವರು ಗುಂಪಾಗಿ ಸೇರಿ  144 ಸೆಕ್ಷನ್ ಉಲ್ಲಂಘಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರ ಈ ನಿರ್ಲಕ್ಷ್ಯ ವರ್ತನೆಯಿಂದಾಗಿ ಅತಿ ಮುಖ್ಯ ಕೆಲಸಕ್ಕಾಗಿ ಹೊರಗೆ ಬರುತ್ತಿರುವವರಿಗೂ ತುಂಬಾ ತೊಂದರೆಯಾಗುತ್ತಿದೆ.

ಅನಾವಶ್ಯಕವಾಗಿ ಪದೇ ಪದೇ ಓಡಾಡುತ್ತಿದವರನ್ನು ಸೂಕ್ತವಾಗಿ ಪತ್ತೆ ಹಚ್ಚಲು ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ  ನಗರದ ಆಯ ಕಟ್ಟಿನ ಸ್ಥಳಗಳಲ್ಲಿ ಗುಪ್ತ ಕ್ಯಾಮೆರಾಗಳನ್ನು ಅಳವಡಿಸುತ್ತಿದೆ ಎಂದು ಹೇಳಿದ್ದಾರೆ. ಪದೇಪದೇ ಓಡಾಟ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರಂಜಾನ್ ವೇಳೆ ದರ್ಗಾ, ಮಸೀದಿಗಳಲ್ಲಿ ಈ ಕೆಲಸ ಮಾಡಿದ್ರೆ ಬೀಳುತ್ತೆ ಕೇಸ್