Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಮತ್ತೆ ವಾಯು ಮಾಲಿನ್ಯ ಪ್ರಮಾಣ ಏರಿಕೆ!

ಬೆಂಗಳೂರಿನಲ್ಲಿ ಮತ್ತೆ ವಾಯು ಮಾಲಿನ್ಯ ಪ್ರಮಾಣ ಏರಿಕೆ!
bangalore , ಭಾನುವಾರ, 24 ಜುಲೈ 2022 (19:15 IST)
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗಿದ್ದು, ಕೆಎಸ್ಪಿಸಿಬಿ ಅಧ್ಯಯನದಲ್ಲಿ  ಆಶ್ಚರ್ಯಕರ ಸಂಗತಿ ಬಯಲಾಗಿದೆ. ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಳಕ್ಕೆ ಸಾರಿಗೆ ವ್ಯವಸ್ಥೆ, ಸಿಟಿಯ ಟ್ರಾಫಿಕ್ ಜಾಮ್, ಟ್ರಾಫಿಕ್ ಸಿಗ್ನಲ್, ರಸ್ತೆ ಕಾಮಗಾರಿ ವಿಳಂಬವೇ ಕಾರಣವಾಗಿದೆ ಎಂದು ತಿಳಿದುಬಂದಿದೆ. ಕೊವಿಡ್ ಪ್ರಕರಣಗಳು ಹೆಚ್ಚಾಗಿದ್ದ ವೇಳೆ ವಾಯು ಮಾಲಿನ್ಯ ತಗ್ಗಿತ್ತು. ಆದರೆ ಇದೀಗ ಯಥಾಸ್ಥಿತಿ ಕೆಲಸಗಳು ಶುರುವಾಗಿರುವ ಹಿನ್ನೆಲೆ ವಾಯು ಮಾಲಿನ್ಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ವಾಯು ಮಾಲಿನ್ಯದ ಹೆಚ್ಚಳವಾಗುತ್ತಿರುವುದನ್ನು ಕಂಡು ಸದ್ಯ ಕೆಎಸ್ಪಿಸಿಬಿ ತಲೆಕಡೆಸಿಕೊಂಡಿದೆ. ಇನ್ನು ನಗರದ ಮಾಲಿನ್ಯಕ್ಕೆ ಸಾರಿಗೆ ವ್ಯವಸ್ಥೆಯೇ ಮೂಲ ಕಾರಣ. ಶೇಕಡಾ 63.5 ರಷ್ಟು ಮಾಲಿನ್ಯ ವಾಹನಗಳಿಂದ ಆಗುತ್ತಿದೆ. ಜೊತೆಗೆ ರಸ್ತೆ ಕಾಮಗಾರಿ, ಇಂಡಸ್ಟ್ರೀಸ್, ಹೋಟೆಲ್, ಟ್ರಾಫಿಕ್ ಸಿಗ್ನಲ್ನಿಂದ ಅಧಿಕ ವಾಯು ಮಾಲಿನ್ಯವಾಗುತ್ತಿದೆ. ಈ ಹಿನ್ನೆಲೆ ಸಾರಿಗೆ ಇಲಾಖೆ ಜತೆ ಚರ್ಚೆ ನಡೆಸಿ, ಎಲೆಕ್ಟ್ರಿಕಲ್ ಬಸ್ ಖರೀದಿಗೆ ಮನವಿ ಮಾಡುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಪಪಟ್ಟಿಯಲ್ಲಿ ತೇಜಸ್ವಿ ಸೂರ್ಯ ಹೆಸರು: ರಾಜೀನಾಮೆಗೆ ಎಎಪಿ ಆಗ್ರಹ