Select Your Language

Notifications

webdunia
webdunia
webdunia
webdunia

ಐನತಿ ಕಳ್ಳ ಅಂದರ್

Ainati thief Andar
bangalore , ಗುರುವಾರ, 22 ಡಿಸೆಂಬರ್ 2022 (21:05 IST)
ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡು ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂದಿತರಿಂದ  5.15 ಲಕ್ಷ ರೂ. ಬೆಲೆಬಾಳುವ ಮೂರು ಕಾರುಗಳು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.ಚಿತ್ರದುರ್ಗ ಜಿಲ್ಲೆಯ ಸದ್ದಾಂ ಹುಸೇನ್ ಅಲಿಯಾಸ್ ತಬ್ರೇಜ್ ಅಲಿಯಾಸ್ ಸದ್ದಾಂ(30) ಬಂಧಿತ ಆರೋಪಿ.ದೊಡ್ಡಬೆಟ್ಟಹಳ್ಳಿ ನಿವಾಸಿ ಕಂಚಿ ರೆಡ್ಡಿಗಾರಿ ಜನಾರ್ಧನ್ ಎಂಬುವವರು ಕಳೆದ ನ.17ರಂದು ರಾತ್ರಿ 10 ಗಂಟೆ ಸುಮಾರಿಗೆ ತಮ್ಮ ಮನೆಯ ಮುಂಭಾಗದ ರಸ್ತೆಯಲ್ಲಿ ಮಾರುತಿ ಸುಜುಕಿ ಕಾರನ್ನು ನಿಲ್ಲಿಸಿ ಊರಿಗೆ ಹೋಗಿದ್ದರು. ನ.23ರಂದು ಊರಿನಿಂದ ವಾಪಸ್ ಬಂದು ನೋಡಿದಾಗ ಕಾರು ಇರಲಿಲ್ಲ. ತಮ್ಮ ಕಾರನ್ನು ಕಳ್ಳತನ ಆಗಿದೆ  ವಿದ್ಯಾರಣ್ಯ ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಪ್ರಕರಣ. ಬೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನ‌ ಬಂದಿಸುವಲ್ಲಿ ಯಶಸ್ವಿಯಾಗಿ ದ್ದಾರೆ.ಇನ್ನೂ ಬಂಧಿತ ಆರೋಪಿಗಳ ವಿರುದ್ಧ ವಿವಿಧ ಠಾಣೆಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಬ್ಬು ನಾರುತ್ತಿರುವ ವಿದ್ಯಾರ್ಥಿನಿ ನಿಲಯ