Select Your Language

Notifications

webdunia
webdunia
webdunia
webdunia

2.60 ಲಕ್ಷ ಜನರಿಗೆ ಡಿಇಸಿ ಮಾತ್ರೆ ನುಂಗಿಸುವ ಗುರಿ

2.60 ಲಕ್ಷ ಜನರಿಗೆ ಡಿಇಸಿ ಮಾತ್ರೆ ನುಂಗಿಸುವ ಗುರಿ
ಕಲಬುರಗಿ , ಗುರುವಾರ, 20 ಸೆಪ್ಟಂಬರ್ 2018 (19:39 IST)
ಕಲಬುರಗಿ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ 2 ವರ್ಷದೊಳಗಿನ ಕಿರಿಯ ಮಕ್ಕಳು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧ್ಧರು, ಗರ್ಭಿಣಿಯರು ಹಾಗೂ ಇನ್ನಿತರ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರನ್ನು ಹೊರತುಪಡಿಸಿ 2605737 ಅರ್ಹ ವ್ಯಕ್ತಿಗಳಿಗೆ ಡಿಇಸಿ ಮಾತ್ರೆಗಳನ್ನು ನುಂಗಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಕೆ. ಪಾಟೀಲ ತಿಳಿಸಿದ್ದಾರೆ.  
ಕಲಬುರಗಿಯ ಜಿಲ್ಲಾ ಸರ್ವೇಕ್ಷಣಾ ಕೇಂದ್ರದಲ್ಲಿ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮದ ಸಿದ್ಧತೆ ಕುರಿತು ಪತ್ರಕರ್ತರನ್ನುದ್ದೇಶಿಸಿ ಮಾತನಾಡಿ, ಸೆಪ್ಟೆಂಬರ್ 24 ರಿಂದ ಡಿಸೆಂಬರ್ 6ರವರೆಗೆ ಜಿಲ್ಲೆಯಾದ್ಯಂತ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆನೇಕಾಲು ರೋಗ ತಗುಲದಂತೆ ಮುಂಜಾಗೃತಾ ಕ್ರಮವಾಗಿ ಮಾತ್ರೆಗಳನ್ನು ನುಂಗಬೇಕು. ಆನೇಕಾಲು ರೋಗ ತಗುಲಿದರೆ ಅದನ್ನು ನಿವಾರಿಸಲು ಸೂಕ್ತ ಚಿಕಿತ್ಸೆ ಇರುವುದಿಲ್ಲ ಎಂದರು.
ಜಿಲ್ಲೆಯ ಎಲ್ಲ ತಾಲೂಕಿನ ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಪ್ರತಿ 50 ಮನೆಗೆ ಒಬ್ಬರಂತೆ ಒಟ್ಟು 2832 ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸಲಾಗಿದ್ದು, ಇವರು ಮನೆ ಮನೆಗೆ ಭೇಟಿ ನೀಡಿ ಮಾತ್ರೆಗಳನ್ನು ನುಂಗಿಸುವರು. ಪ್ರತಿ 10 ಜನ ಔಷಧ ವಿತರಕರಿಗೆ ಒಬ್ಬರಂತೆ ಒಟ್ಟು 283 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಜೆಸ್ಕಾಂ ಅಧಿಕಾರಿ