Publish Date: Thu, 20 Sep 2018 (19:33 IST)
Updated Date: Thu, 20 Sep 2018 (19:37 IST)
ವಿದ್ಯುತ್ ಸಂಪರ್ಕ ಕಲ್ಪಿಸುವ ವಿಚಾರವಾಗಿ ಲಂಚ ಪಡೆಯುವಾಗ ಎಸಿಬಿ ಬಲೆಗೆ ಜೆಸ್ಕಾಂ ಅಧಿಕಾರಿ ಬಿದ್ದಿದ್ದಾರೆ.
ಜೆಸ್ಕಾಂ ಪ್ರಭಾರಿ ಇಂಜಿನಿಯರ್ ಅಮರೆಗೌಡ ಅಗರಟಿಗೆ ಎಸಿಬಿ ಬಲೆಗೆ ಬಿದ್ದವರು. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಜೆಸ್ಕಾಂ ಪ್ರಭಾರಿ ಅಧಿಕಾರಿಯಾಗಿದ್ದಾರೆ.
ದೇವೇಂದ್ರಪ್ಪ ಕಕ್ಕೇರಿ ಎನ್ನುವ ರೈತನಿಂದ 2 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿಯಾಗಿದ್ದಾರೆ.
ಪಟ್ಟಣದ ಹೋಟೆಲ್ ವೊಂದರಲ್ಲಿ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಜೆಸ್ಕಾಂ ಅಧಿಕಾರಿಯನ್ನು
ಎಸಿಬಿ ಇನ್ಸ್ ಪೆಕ್ಟರ್ ವೀರೇಶ ಕರಡಿಗುಡ್ಡ ನೇತೃತ್ವದಲ್ಲಿ ದಾಳಿ ನಡೆಸಿ ಬಲೆಗೆ ಬೀಳಿಸಲಾಗಿದೆ. ಕೆಲವು ದಿನಗಳಿಂದ ವಿದ್ಯುತ್ ಸಂಪರ್ಕ ನೀಡದೆ ಅಧಿಕಾರಿ ಸತಾಯಿಸುತ್ತಿದ್ದರು ಎನ್ನಲಾಗಿದೆ.