Select Your Language

Notifications

webdunia
webdunia
webdunia
webdunia

ಪತಿ ನಿವೃತ್ತಿ ಬೆನ್ನಲ್ಲೇ ಶಾಲಿನಿ ರಜನೀಶ್‌ಗೆ ಒಲಿದ ಮುಖ್ಯ ಕಾರ್ಯದರ್ಶಿ ಹುದ್ದೆ

ಪತಿ ನಿವೃತ್ತಿ ಬೆನ್ನಲ್ಲೇ ಶಾಲಿನಿ ರಜನೀಶ್‌ಗೆ ಒಲಿದ ಮುಖ್ಯ ಕಾರ್ಯದರ್ಶಿ ಹುದ್ದೆ

Sampriya

, ಶುಕ್ರವಾರ, 26 ಜುಲೈ 2024 (16:11 IST)
Photo Courtesy X
ಬೆಂಗಳೂರು: ಶಾಲಿನಿ ರಜನೀಶ್ ಅವರು ನೂತನ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿಯಾಗಲಿದ್ದಾರೆ. ಇವರ ಪತಿ ರಜನೀಶ್ ಗೋಯೆಲ್ ಅವರು ಕರ್ನಾಟಕ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರಾವಧಿ ಇದೇ ತಿಂಗಳಲ್ಲಿ ಮುಕ್ತಾಯವಾಗುತ್ತಿರುವುದರಿಂದ ಈ ಹೊಣೆಗಾರಿಯವನ್ನು ಇದೀಗ ಶಾಲಿನಿ ಅವರಿಗೆ ಸರ್ಕಾರ ವಹಿಸಲು ತೀರ್ಮಾನಿಸಿದೆ.

ಈ ಸಂಬಂಧ  ಸಚಿವ ಎಚ್ ಕೆ ಪಾಟೀಲ್ ಅವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್​ಕೆ ಪಾಟೀಲ್, ಹಾಲಿ ಸಿಎಸ್​ (ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ) ರಜನೀಶ್ ಗೋಯಲ್ 5 ದಿನದಲ್ಲಿ​ ನಿವೃತ್ತಿ ಆಗುತ್ತಾರೆ. ಹೀಗಾಗಿ
ನೂತನ ಸಿಎಸ್​ ಆಗಿ ಶಾಲಿನಿ ರಜನೀಶ್​ರನ್ನು ನೇಮಿಸಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇದೇ ತಿಂಗಳ 31ಕ್ಕೆ ರಾಜ್ಯ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌ ಅವರ ಅಧಿಕಾರಾವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆ ನೂತನ ಕಾರ್ಯದರ್ಶಿ ಬಗ್ಗೆ ಭಾರೀ ಚರ್ಚೆಯಾಗುತ್ತಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಅಮಿತ್ ಶಾ ವಿರುದ್ಧ ಮಾನನಷ್ಟ ಹೇಳಿಕೆ: ಉತ್ತರ ಪ್ರದೇಶ ನ್ಯಾಯಾಲಯಕ್ಕೆ ಹಾಜರಾದ ರಾಹುಲ್ ಗಾಂಧಿ