ಬೆಂಗಳೂರು: ತೆಲಂಗಾಣದಲ್ಲಿ ರಂಝಾನ್ ಅವಧಿಯಲ್ಲಿ ಮುಸ್ಲಿಂ ಸರ್ಕಾರೀ ನೌಕರರಿಗೆ 1 ಗಂಟೆ ಕೆಲಸದ ಅವಧಿ ಕಡಿಮೆ ಮಾಡಿದ ಬೆನ್ನಲ್ಲೇ ಕರ್ನಾಟಕದಲ್ಲೂ ಮುಸ್ಲಿಮರಿಂದ ಅದೇ ಬೇಡಿಕೆ ಬಂದಿದೆ.
ರಂಝಾನ್ ಸಂದರ್ಭದಲ್ಲಿ ಒಂದು ಗಂಟೆ ಕೆಲಸದ ಅವಧಿ ಕಡಿಮೆ ಮಾಡಿ ಎಂದು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎ ಹುಸೇನ್ ಮನವಿ ಮಾಡಿದ್ದಾರೆ. ರಂಜಾನ್ ತಿಂಗಳಲ್ಲಿ ಉಪವಾಸ ಬಿಡೋಕೆ ನಮಗೂ ಕೆಲಸದಿಂದ ಕೊಂಚ ವಿನಾಯ್ತಿ ಕೊಡಿ ಎಂದು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.
ತೆಲಂಗಾಣ ಸರ್ಕಾರ ಅವರಾಗಿಯೇ ಕೊಟ್ಟಿದ್ದಾರೆ. ಹೀಗಾಗಿ ನಾವೂ ಮನವಿ ಮಾಡುತ್ತಿದ್ದೇವೆ. ಇದು ಒತ್ತಾಯ ಅಲ್ಲ, ಮನವಿ ಅಷ್ಟೇ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಗೆ ಹುಸೇನ್ ಪತ್ರ ಬರೆದಿದ್ದಾರೆ.
ದಸರಾಗೆ 10-15 ದಿನ ರಜೆ ಕೊಡ್ತಾರೆ, ಶಿವರಾತ್ರಿಗೆ ಕೊಡ್ತಾರೆ ಅದಕ್ಕೆ ನಮ್ಮದೇನೂ ತಕರಾರಿಲ್ಲ. ಈಗ ರಂಝಾನ್ ಸಮಯದಲ್ಲಿ ನಮಗೆ ಒಂದು ಗಂಟೆ ಮುಂಚಿತವಾಗಿ ಮನೆಗೆ ಹೋಗಲು ಅವಕಾಶ ಕೊಡಿ ಎಂದು ಕೇಳುತ್ತಿದ್ದೇವಷ್ಟೇ ಎಂದು ಹುಸೇನ್ ಹೇಳಿದ್ದಾರೆ.