Select Your Language

Notifications

webdunia
webdunia
webdunia
webdunia

ಮೋಜಿಗಾಗಿ ತುಂಗಭದ್ರಾ ನದಿಗೆ ಜಿಗಿದು, ನೀರುಪಾಲಾಗಿದ್ದ ವೈದ್ಯೆಯ ಮೃತದೇಹ ಪತ್ತೆ

Tungabhadra River, Hyderbad Doctor, Doctor Ananya MohanRao No More

Sampriya

ಗಂಗಾವತಿ , ಗುರುವಾರ, 20 ಫೆಬ್ರವರಿ 2025 (19:31 IST)
ಗಂಗಾವತಿ: ತುಂಗಭದ್ರಾ ನದಿಗೆ 20 ಅಡಿಯಿಂದ ಜಿಗಿದು, ನೀರುಪಾಲಾಗಿದ್ದ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯ ವೈದ್ಯೆ ಅನನ್ಯ ಮೋಹನ್​ರಾವ್ ಅವರ ಮೃತದೇಹ ಇಂದು ಪತ್ತೆಯಾಗಿದೆ.

ಅನನ್ಯ ಮೋಹನ್​ರಾವ್ ಅವರು ತಾಲೂಕಿನ ಸಣಾಪುರದ ಸಮೀಪ ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದರು. ಸುಮಾರು 16 ಗಂಟೆಗಳ ಶೋಧ ಕಾರ್ಯಾಚರಣೆ ಬಳಿಕ ಇಂದು ಮೃತದೇಹ ಪತ್ತೆಯಾಗಿದೆ. ‌‌

ಮೃತದೇಹವನ್ನು ಹೊರತರುತ್ತಿದ್ದ ಹಾಗೇ ವೈದ್ಯೆಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗಳು ನದಿಯಲ್ಲಿ ನಾಪತ್ತೆಯಾಗಿರುವ ವಿಚಾರ ತಿಳಿಯುತ್ತಿದ್ದಂತೆ, ಬುಧವಾರವೇ ಅನನ್ಯ ತಂದೆ, ತಾಯಿ ಹಾಗೂ ಕುಟುಂಬ ಸದಸ್ಯರು ಆಗಮಿಸಿದ್ದರು.

ಕುಟುಂಬಸ್ಥರ ಸಮ್ಮುಖದಲ್ಲಿಯೇ ಅನನ್ಯ ಮೃತದೇಹದ ಹುಡುಕಾಟ ನಡೆದಿತ್ತು. ಬಳಿಕ ನದಿಯ ದಡದಲ್ಲಿಯೇ ಶವದ ಮರಣೋತ್ತರ ಪರೀಕ್ಷೆ ಮುಗಿಸಿದ ವೈದ್ಯರು, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು. ಆ್ಯಂಬುಲೆನ್ಸ್​​ನಲ್ಲಿ ಅನನ್ಯ ಅವರ ಮೃತದೇಹವನ್ನು ಹೈದರಾಬಾದ್​ಗೆ ಕೊಂಡೊಯ್ಯಲಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಈ ತಿಂಗಳ ಕೊನೆಯಲ್ಲಿ ಬಿಸಿಲಿನ ತಾಪ ಇಳಿಮುಖ ಸಾಧ್ಯತೆ