ಹೈದರಾಬಾದ್: ಮುಸ್ಲಿಂ ನೌಕರರಿಗೆ ಕೆಲಸದ ಅವಧಿಯಲ್ಲಿ ಒಂದು ಗಂಟೆ ಕಡಿತ ಮಾಡಿ ತೆಲಂಗಾಣ ಸರ್ಕಾರ ಘೋಷಣೆ ಮಾಡಿದೆ. ಆದರೆ ಇದು ಕೆಲವೇ ದಿನ ಮಾತ್ರ.
ಪವಿತ್ರ ರಂಜಾನ್ ಹಬ್ಬದ ಆಚರಣೆ ನಿಮಿತ್ತ ತೆಲಂಗಾಣದಲ್ಲಿ ಮುಸ್ಲಿಂ ಧರ್ಮಕ್ಕೆ ಸೇರಿದ ಸರ್ಕಾರೀ ನೌಕರರಿಗೆ ಈ ವಿನಾಯ್ತಿ ನೀಡಲಾಗಿದೆ. ರಂಜಾನ್ ಮಾಸದಲ್ಲಿ ಮಾತ್ರ ಒಂದು ಗಂಟೆ ಕೆಲಸದ ಅವಧಿ ಕಡಿತ ಮಾಡಲಾಗಿದೆ.
ಮಾರ್ಚ್ 2 ರಿಂದ ಮಾರ್ಚ್ 31 ರವರೆಗೆ ಈ ಹೊಸ ನಿಯಮ ಅನ್ವಯವಾಗಲಿದೆ. ಈ ಒಂದು ತಿಂಗಳು ಸಂಜೆ 5 ಗಂಟೆ ಬದಲಾಗಿ 4 ಗಂಟೆಗೇ ಮನೆಗೆ ಹೋಗಲು ಅವಕಾಶ ನೀಡಲಾಗಿದೆ. ಸಾರ್ವಜನಿಕ ವಲಯದ ಕೈಗಾರಿಕೆಗಳು, ಸಂಸ್ಥೆಗಳಲ್ಲಿ ಕೆಲಸ ಮಾಡುವ ಮುಸ್ಲಿಂ ನೌಕರರಿಗೆ ಈ ನಿಯಮ ಅನ್ವಯವಾಗಲಿದೆ.
ಆದರೆ ತೆಲಂಗಾಣ ಕಾಂಗ್ರೆಸ್ ಸರ್ಕಾರದ ಈ ನಿರ್ಧಾರವನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಮುಸ್ಲಿಂ ಮತಗಳನ್ನು ಆಧರಿಸಿ ಅಧಿಕಾರಕ್ಕೆ ಬಂದಿದೆ. ಈಗ ತುಷ್ಠೀಕರಣ ರಾಜಕೀಯ ನಡೆಸುತ್ತಿದೆ. ಮುಸ್ಲಿಂ ಮತದಾರರನ್ನು ಓಲೈಸಲೆಂದೇ ಈ ನಿರ್ಧಾರ ಮಾಡಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.