Select Your Language

Notifications

webdunia
webdunia
webdunia
webdunia

ಏರೋ ಇಂಡಿಯಾ ಷೋ ಫೆ. 20ರಿಂದ

ಏರೋ ಇಂಡಿಯಾ ಷೋ ಫೆ. 20ರಿಂದ
ಬೆಂಗಳೂರು , ಬುಧವಾರ, 5 ಡಿಸೆಂಬರ್ 2018 (16:48 IST)

ಬೆಂಗಳೂರಿನ  ಯಲಹಂಕ ವಾಯು ನೆಲೆಯಲ್ಲಿ 2019ರಏರೋ ಇಂಡಿಯಾ ವೈಮಾನಿಕ ಪ್ರದರ್ಶನ  ಫೆಬ್ರವರಿ ೨೦ ರಿಂದ೨೪ ವರಗೆ ಪ್ರದರ್ಶನವರೆಗೆ ನಡೆಯಲಿದೆ.

ಐದು ದಿನಗಳ ಕಾಲ ದೇಶ ವಿದೇಶದ ರಕ್ಷಣ ಪರಿಕರಗಳ ಪ್ರದರ್ಶನ, ಹೊಸ ಆವಿಷ್ಕಾರಗಳ ವಿನಿಮಯ ಸೇರಿದಂತೆ ರಕ್ಷಣಾ ಉದ್ಯಮಗಳ ಪರಸ್ಪರ ಮಾತುಕತೆ ನಡೆಯಲಿದೆ.

ಉತ್ತರ ಪ್ರದೇಶದ ಲಕ್ನೋಗೆ ವೈಮಾನಿಕ ಪ್ರದರ್ಶನ ಸ್ಥಳಾಂತರವಾಗಲಿದೆ ಎನ್ನುವ ಸುದ್ದಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು.

ಪ್ರತಿರೋಧ ಹೆಚ್ಚಾದ ಹಿನ್ನೆಲೆಯಲ್ಲಿ ವೈಮಾನಿಕ ಪ್ರದರ್ಶನ ಸ್ಥಳಾಂತರ ಪ್ರಕ್ರಿಯೆಯನ್ನು ಕೇಂದ್ರ ರಕ್ಷಣಾ ಇಲಾಖೆ ಕೈ ಬಿಟ್ಟು ಬೆಂಗಳೂರಿನಲ್ಲಿಯೇ ವೈಮಾನಿಕ ಪ್ರದರ್ಶನ ನಡೆಸುವುದಾಗಿ ಪ್ರಕಟಿಸಿತ್ತು.

ವೈಮಾನಿಕ ಪ್ರದರ್ಶನಕ್ಕೆ ಇನ್ನು ಎರಡು ತಿಂಗಳಷ್ಠೇ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಯಲಹಂಕ ವಾಯುನೆಲೆ ಪೂರ್ವ ಸಿದ್ದತೆಗಳು ಭರದಿಂದ ಸಾಗಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗಾವಿ ಅಧಿವೇಶನದ ನಂತರ ಮೈತ್ರಿ ಸರ್ಕಾರ ಉರುಳುವುದು ಖಚಿತ- ಡಿ.ವಿ.ಸದಾನಂದಗೌಡ