Select Your Language

Notifications

webdunia
webdunia
webdunia
webdunia

ಸಿರಿಯಾ ವಾಯು ನೆಲೆ ಮೇಲೆ ಮಿಸೈಲ್ ದಾಳಿ

ಸಿರಿಯಾ ವಾಯು ನೆಲೆ ಮೇಲೆ ಮಿಸೈಲ್ ದಾಳಿ
ಡಮಾಸ್ಕಸ್ , ಸೋಮವಾರ, 9 ಏಪ್ರಿಲ್ 2018 (15:23 IST)
ಡಮಾಸ್ಕಸ್: ಸಿರಿಯಾದ ಹೋಮ್ಸ್ ನಗರದ ಸಮೀಪದಲ್ಲಿರುವ ಮುಖ್ಯ ವಾಯು ನೆಲೆ ತೈಫುರ್ ಅಥವಾ ಟಿ4 ಮೇಲೆ ಮಿಸೈಲ್ ದಾಳಿ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ದಾಳಿ ಮಾಡಿವರು ಯಾರು ಎಂಬುದರ ಬಗ್ಗೆ ತಿಳಿದಿಲ್ಲ. ದಾಳಿಯಲ್ಲಿ ಹಲವರು ಗಾಯಗೊಂಡಿರಬಹುದು ಅಥವಾ ಸಾವನ್ನಪ್ಪಿರಬಹುದು ಎಂದೂ ಮಾಧ್ಯಮಗಳು ಹೇಳಿವೆ.


ರಸಾಯನಿಕ ದಾಳಿಯ ಕುರಿತು ಖಂಡಿಸಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ದಾಳಿಗೆ ಪ್ರತಿಯಾಗಿ 'ಪ್ರಾಣಿ' ಅಸದ್ ಮತ್ತು ಅವರನ್ನು ಬೆಂಬಲಿಸುತ್ತಿರುವ ರಷ್ಯಾ ಹಾಗೂ ಇರಾನ್ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.


ಇನ್ನು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಕೂಡ ಈ ದಾಳಿಯ ವಿರುದ್ಧ ದನಿ ಎತ್ತಿದ್ದಾರೆ. ಮತ್ತು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಟ್ರಂಪ್ ಜತೆಗಿನ ಜಂಟಿ ಹೇಳಿಕೆಯಲ್ಲಿ ಅವರು ತಿಳಿಸಿದ್ದರು.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಕೆ.ಇ.ಕೃಷ್ಣಮೂರ್ತಿ ಅವರ ವಿರುದ್ಧ ಯಡಿಯೂರಪ್ಪ ಫುಲ್ ಗರಂ!