Select Your Language

Notifications

webdunia
webdunia
webdunia
webdunia

ವಕೀಲರನ್ನು ಪ್ಯಾನಲ್​​ಗೆ ಸೇರಿಸಿಕೊಳ್ಳುವುದು ಬ್ಯಾಂಕ್​​ನ ವಿವೇಚನೆಗೆ ಬಿಟ್ಟ ವಿಚಾರ...!

ವಕೀಲರನ್ನು ಪ್ಯಾನಲ್​​ಗೆ ಸೇರಿಸಿಕೊಳ್ಳುವುದು ಬ್ಯಾಂಕ್​​ನ ವಿವೇಚನೆಗೆ ಬಿಟ್ಟ ವಿಚಾರ...!
bangalore , ಶುಕ್ರವಾರ, 10 ಡಿಸೆಂಬರ್ 2021 (20:38 IST)
ಬೆಂಗಳೂರು: ವಕೀಲರನ್ನು ಪ್ಯಾನಲ್​​ಗೆ ಸೇರಿಸಿಕೊಳ್ಳುವುದು ಬ್ಯಾಂಕ್​​ನ ವಿವೇಚನೆಗೆ ಬಿಟ್ಟ ವಿಚಾರ. ಇಂತಹ ವಿಷಯಗಳಲ್ಲಿ ರಿಟ್ ಕೋರ್ಟ್ ಸಾಮಾನ್ಯವಾಗಿ ಮಧ್ಯಪ್ರವೇಶಿಸಲು ಮತ್ತು ಆಳವಾಗಿ ಪರೀಕ್ಷಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ತಮ್ಮನ್ನು ಬ್ಯಾಂಕ್ ಪ್ಯಾನಲ್​​ನಿಂದ ಕೈಬಿಟ್ಟ ಕ್ರಮ ಪ್ರಶ್ನಿಸಿ ವಕೀಲ ತಿಮ್ಮಣ್ಣ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ, ವಕೀಲರನ್ನು ಪ್ಯಾನಲ್​​ಗೆ ಸೇರಿಸಿಕೊಳ್ಳುವುದು ಬ್ಯಾಂಕ್ ವಿವೇಚನೆಗೆ ಬಿಟ್ಟಿರುವ ವಿಚಾರ. ಹಾಗೆಯೇ ಇದೊಂದು ಕಕ್ಷಿದಾರ ಮತ್ತು ವಕೀಲರ ನಡುವಿನ ಸಂಬಂಧದಂತೆಯೇ ಇರುತ್ತದೆ. ಇಂತಹ ವಿಚಾರಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರತಿವಾದಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಯಾವುದೇ ಮುನ್ಸೂಚನೆ ನೀಡದೇ, ನೋಟಿಸನ್ನೂ ಕೊಡದೇ ವಕೀಲರನ್ನು ಪ್ಯಾನಲ್​​ನಿಂದ ಕೈಬಿಟ್ಟಿದೆ. ಈ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿದ್ದರು. ವಾದ ಪರಿಗಣಿಸಿಲು ನಿರಾಕರಿಸಿರುವ ಪೀಠ, ಪ್ಯಾನಲ್​​ಗೆ ಯಾರನ್ನು ತೆಗೆದುಕೊಳ್ಳಬೇಕು ಎಂಬುದು ಬ್ಯಾಂಕ್​​ಗೆ ಬಿಟ್ಟಿ ವಿಚಾರ. ಬ್ಯಾಂಕ್​​ನ ಆದೇಶದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂತ್ರಿ ಮಾಲ್ ಬೀಗಮುದ್ರೆ ತೆರೆಯಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ