Select Your Language

Notifications

webdunia
webdunia
webdunia
webdunia

ಮಂತ್ರಿ ಮಾಲ್ ಬೀಗಮುದ್ರೆ ತೆರೆಯಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ

ಮಂತ್ರಿ ಮಾಲ್ ಬೀಗಮುದ್ರೆ ತೆರೆಯಲು ಬಿಬಿಎಂಪಿಗೆ  ಹೈಕೋರ್ಟ್ ಆದೇಶ
bangalore , ಶುಕ್ರವಾರ, 10 ಡಿಸೆಂಬರ್ 2021 (20:35 IST)
ಬೆಂಗಳೂರು: ತೆರಿಗೆ ಕಟ್ಟದ ಆರೋಪದಲ್ಲಿ ಬೆಂಗಳೂರಿನ ಪ್ರಮುಖ ಶಾಪಿಂಗ್ ಮಾಲ್ ಆದ ಮಂತ್ರಿ ಮಾಲ್​ಗೆ  ಬಿಬಿಎಂಪಿ ಅಧಿಕಾರಿಗಳು 4 ದಿನಗಳ ಹಿಂದೆ ಬೀಗ ಹಾಕಿದ್ದು, ಮಂತ್ರಿ ಮಾಲ್ ಬೀಗಮುದ್ರೆ ತೆರೆಯಲು ಬಿಬಿಎಂಪಿಗೆ  ಹೈಕೋರ್ಟ್ ಆದೇಶ ನೀಡಿದೆ.
ತೆರಿಗೆ ಬಾಕಿಯ ಸ್ವಲ್ಪ ಭಾಗವನ್ನು ತಕ್ಷಣ ಪಾವತಿಸಲು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಒಳಗೊಂಡ ಹೈಕೋರ್ಟ್​ನ ಏಕಸದಸ್ಯ ಪೀಠ ಅರ್ಜಿದಾರ ಹಮಾರಾ ಷೆಲ್ಟರ್ಸ್, ಅಭಿಷೇಕ್ ಪ್ರಾಪರ್ಟೀಸ್​ಗೆ ಸೂಚನೆ ನೀಡಿದೆ.
ಮಂತ್ರಿಮಾಲ್, ಬಿಬಿಎಂಪಿ ಎರಡೂ ನಿಯಮಗಳನ್ನು ಉಲ್ಲಂಘಿಸಿವೆ. ನಿಗದಿತ ಅವಧಿಯಲ್ಲಿ ಮಂತ್ರಿ ಮಾಲ್ ತೆರಿಗೆ ಪಾವತಿಸಿಲ್ಲ. ಸೀಲ್ ಮಾಡಿ ಬಿಬಿಎಂಪಿಯೂ ನಿಯಮಾವಳಿ ಉಲ್ಲಂಘಿಸಿದೆ. ತಕ್ಷಣ 4 ಕೋಟಿ ರೂ. ಮೊತ್ತದ ಚೆಕ್ ನೀಡಲು ಕೋಟ್೯ ಸೂಚನೆ ನೀಡಿದೆ.
ಡಿ.13ರ ಮಧ್ಯಾಹ್ನದೊಳಗೆ 2 ಕೋಟಿ ಡಿಡಿ ಪಾವತಿಸಬೇಕು ಎಂದು ಆದೇಶಿಸಿ, ವಿಚಾರಣೆ   ಡಿಸೆಂಬರ್ 13ಕ್ಕೆ ಮುಂದೂಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನವರಿ 1 ರಿಂದ ಎಟಿಎಂ ವಹಿವಾಟು ದುಬಾರಿಯಾಗಲಿವೆ: ಭಾರತೀಯ ರಿಸರ್ವ್ ಬ್ಯಾಂಕ್