Publish Date: Thu, 01 Jul 2021 (09:19 IST)
Updated Date: Thu, 01 Jul 2021 (09:33 IST)
ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಬಂಡಾಯವೆದ್ದಿರುವ ಸಚಿವ ಸಿಪಿ ಯೋಗೇಶ್ವರ್ ಹೈಕಮಾಂಡ್ ಭೇಟಿ ಬಳಿಕ ಟೆಂಪಲ್ ರನ್ ನಡೆಸಿದ್ದಾರೆ.
ನಾಯಕತ್ವ ಬದಲಾವಣೆ ವಿಚಾರದಲ್ಲಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ ಎಂದಿರುವ ಯೋಗೇಶ್ವರ್ ಇದಕ್ಕೂ ಮೊದಲು ದೇವರ ಮೊರೆ ಹೋಗಿದ್ದಾರೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಹನುಮಪ್ಪನ ದರ್ಶನ ಪಡೆದು ಪೂಜೆ ಮಾಡಿಸಿದ್ದಾರೆ.
ಈ ಸಂದರ್ಭದಲ್ಲಿ ನಟಿ, ಬಿಜೆಪಿ ನಾಯಕಿ ಶ್ರುತಿ ಕೂಡಾ ಸಾಥ್ ನೀಡಿದ್ದಾರೆ. ವಿಶೇಷವೆಂದರೆ ಇದಕ್ಕೂ ಮೊದಲು ಯೋಗೇಶ್ವರ್ ಇನ್ನೊಬ್ಬ ಬಂಡಾಯ ನಾಯಕ ಬಸನಗೌಡ ಯತ್ನಾಳ್ ಭೇಟಿ ಸಂದರ್ಭದಲ್ಲಿಯೂ ಜೊತೆಯಾಗಿದ್ದರು. ಹೀಗಾಗಿ ಶ್ರುತಿ ಕೂಡಾ ನಾಯಕತ್ವ ಬದಲಾವಣೆಯಾಗಬೇಕು ಎನ್ನುವ ನಾಯಕರ ಗುಂಪಿಗೆ ಸಾಥ್ ನೀಡಿದ್ದಾರೆಯೇ ಎಂಬ ಅನುಮಾನ ಮೂಡಿದೆ.