Publish Date: Sat, 06 Jul 2024 (12:00 IST)
Updated Date: Sat, 06 Jul 2024 (12:03 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟ ಕಿಶೋರ್ ಮತ್ತೊಮ್ಮೆ ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ. ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯನ್ನು ತಿರುಚಿದ ಮೋದಿ ತಾನೊಬ್ಬ ಮಹಾನ್ ಸುಳ್ಳುಗಾರ ಎಂದು ಸಾಬೀತುಪಡಿಸಿದ್ದಾರೆ ಎಂದಿದ್ದಾರೆ.
ಲೋಕಸಭೆಯಲ್ಲಿ ಇತ್ತೀಚೆಗೆ ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಿ ಮೊದಲ ಭಾಷಣ ಮಾಡಿದ್ದರು. ಈ ವೇಳೆ ಹಿಂದೂ ಹಿಂದೂ ಎಂದು ಹೇಳಿಕೊಂಡು ತಿರುಗಾಡುವವರು ಸದಾ ಹಿಂಸಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಜೆಪಿಯವರು ಹಿಂದೂಗಳೇ ಅಲ್ಲ ಎಂದಿದ್ದರು.
ಇದರ ವಿರುದ್ಧ ಬಿಜೆಪಿ ಭಾರೀ ಆಕ್ರೋಶ ವ್ಯಕ್ತಪಡಿಸಿತ್ತು. ಇದು ಗಂಭೀರವಾದ ವಿಷಯ. ರಾಹುಲ್ ಹಿಂದೂಗಳಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ವಿರೋಧ ವ್ಯಕ್ತಪಡಿಸಿದ್ದರು. ಇದರ ಬಗ್ಗೆ ಪರ-ವಿರೋಧ ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ನಟ ಕಿಶೋರ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮನ್ನು ಹಿಂದೂ ಎಂದು ಕರೆದುಕೊಳ್ಳುವವರು ದಿನದ 24 ಗಂಟೆ ಹಿಂಸಾಚಾರದಲ್ಲಿ ತೊಡಗುತ್ತಾರೆ. ಅವರು ಹಿಂದೂಗಳೇ ಅಲ್ಲ ಎಂದು ಹೇಳಿದ್ದ ಮಾತನ್ನು ಮೋದಿ ಕ್ಷಣಾರ್ಧದಲ್ಲಿ ತಿರುಚಿ ತನ್ನನ್ನು ನಾನು ಸುಳ್ಳನೆಂದು ಸಾಬೀತುಪಡಿಸಿದ್ದಾರೆ ಎಂದು ಕಿಶೋರ್ ವಾಗ್ದಾಳಿ ನಡೆಸಿದ್ದಾರೆ.