Publish Date: Thu, 04 Jul 2024 (13:44 IST)
Updated Date: Thu, 04 Jul 2024 (13:57 IST)
ನವದೆಹಲಿ: ಟಿ20 ವಿಶ್ವಕಪ್ ವಿಜೇತ ಭಾರತ ತಂಡವನ್ನು ಇಂದು ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ ಭೇಟಿಯಾಗಿ ಸನ್ಮಾನಿಸಿದರು. ಈ ವೇಳೆ ಆಟಗಾರರ ಜೊತೆ ಅವರ ಸ್ಮೈಲಿ ಪೋಸ್ ಎಲ್ಲರ ಗಮನ ಸೆಳೆದಿದೆ.
ಇಂದು ಮುಂಜಾನೆ ವಿಶೇಷ ವಿಮಾನದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ದೆಹಲಿಗೆ ಬಂದಿಳಿಯಿತು. ಈ ವೇಳೆ ಅವರಿಗೆ ಜನರಿಂದ ಭಾರೀ ಸ್ವಾಗತ ದೊರೆಯಿತು. ಕ್ರಿಕೆಟಿಗರು ಬಾಂಗ್ಲಾ ನೃತ್ಯಗಾರರೊಂದಿಗೆ ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿ ಸಂಭ್ರಮಿಸಿದರು. ಬಳಿಕ ಎಲ್ಲರೂ ನೇರವಾಗಿ ಹೋಟೆಲ್ ಗೆ ತೆರಳಿದ್ದರು.
ಇದಾದ ಬಳಿಕ ಬೆಳಿಗ್ಗೆ 11 ಗಂಟೆ ಸುಮಾರಿಗೆ ಪ್ರಧಾನಿ ನಿವಾಸಕ್ಕೆ ಎಲ್ಲಾ ಕ್ರಿಕೆಟಿಗರನ್ನು ಕರೆತರಲಾಯಿತು. ಸುಮಾರು 1 ಗಂಟೆ ಕಾಲ ಮೋದಿ ಜೊತೆ ಕ್ರಿಕೆಟಿಗರು ಕಾಲ ಕಳೆದರು. ಈ ವೇಳೆ ವಿಶ್ವಕಪ್ ಟ್ರೋಫಿ ನೋಡಿ ಪ್ರಧಾನಿ ಖುಷಿಪಟ್ಟಿದ್ದಾರೆ. ಬಳಿಕ ಟೀಂ ಇಂಡಿಯಾ ಜೆರ್ಸಿ ಧರಿಸಿದ್ದ ಎಲ್ಲಾ ಕ್ರಿಕೆಟಿಗರು, ಕೋಚ್ ಸಿಬ್ಬಂದಿ ಪ್ರಧಾನಿ ಜೊತೆ ಫೋಟೋ ಸೆಷನ್ ನಡೆಸಿದರು.
ಪ್ರತಿಯೊಬ್ಬ ಕ್ರಿಕೆಟಿಗರನ್ನೂ ಪ್ರತ್ಯೇಕವಾಗಿ ಮಾತನಾಡಿಸಿದ ಮೋದಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಎಲ್ಲರ ಜೊತೆ ಕುಳಿತು ಉಪಾಹಾರ ಸೇವಿಸಿದ್ದಲ್ಲದೆ, ತಮಾಷೆ ಮಾಡುತ್ತಾ ಕಾಲ ಕಳೆದಿದ್ದಾರೆ. ಪ್ರಧಾನಿ ಮೋದಿ ಜೊತೆಗೆ ಪ್ರತಿಯೊಬ್ಬರೂ ರೌಂಡ್ ಟೇಬಲ್ ಮಾದರಿಯಲ್ಲಿ ಕುಳಿತು ಹರಟೆ ಹೊಡೆದಿದ್ದು ವಿಶೇಷವಾಗಿತ್ತು.