Select Your Language

Notifications

webdunia
webdunia
webdunia
webdunia

ಗಂಟಲು ಹರಿದುಕೊಂಡು ನನಗೆ ಅಭ್ಯಾಸವಾಗಿದೆ: ಪ್ರಧಾನಿ ಮೋದಿ

PM Modi

Krishnaveni K

ನವದೆಹಲಿ , ಬುಧವಾರ, 3 ಜುಲೈ 2024 (08:50 IST)
ನವದೆಹಲಿ: ಪಾರ್ಲಿಮೆಂಟ್ ನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸುವ ವೇಳೆ ಪ್ರಧಾನಿ ನರೇಂದ್ರ ಮೋದಿ ತಮ್ಮ  ವಿರುದ್ಧ ಘೋಷಣೆ ಕೂಗುತ್ತಿದ್ದ ವಿಪಕ್ಷಗಳಿಗೆ ಟಾಂಗ್ ಕೊಟ್ಟಿದ್ದಾರೆ.

ನಿನ್ನೆ ಸಂಜೆ ಪ್ರಧಾನಿ ಮೋದಿ ಸಂಸತ್ ನಲ್ಲಿ ಸುದೀರ್ಘವಾಗಿ ಮಾತನಾಡಿದರು. ಈ ವೇಳೆ ರಾಹುಲ್ ಗಾಂಧಿ ಮೊನ್ನೆ ಹಿಂದೂಗಳೆಂದು ಹೇಳಿಕೊಂಡು ತಿರುಗಾಡುವವರೆಲ್ಲರೂ ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂದು ಹೇಳಿಕೆ ನೀಡಿದ್ದಕ್ಕೆ ತಿರುಗೇಟು ನೀಡಿದ್ದಾರೆ. ಜೊತೆಗೆ ತಮ್ಮ ಭಾಷಣದುದ್ದಕ್ಕೂ ನೆಹರೂನಿಂದ ಹಿಡಿದು ಈಗಿನ ಕಾಂಗ್ರೆಸ್ ನಾಯಕರವರೆಗೆ ಮೋದಿ ಟೀಕಾ ಪ್ರಹಾರ ನಡೆಸಿದರು.

ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದಾಗ ವಿಪಕ್ಷಗಳು ಅವರ ವಿರುದ್ಧ ಘೋಷಣೆ ಕೂಗಿ ಗದ್ದಲವೆಬ್ಬಿಸುತ್ತಲೇ ಇದ್ದರು. ಸ್ಪೀಕರ್ ಓಂ ಬಿರ್ಲಾ ಎರಡು ಬಾರಿ ಎಚ್ಚರಿಕೆ ನೀಡಿದರೂ ವಿಪಕ್ಷಗಳ ಗದ್ದಲ ನಿಲ್ಲಲಿಲ್ಲ. ಇದು ಸಭೆಗೆ ಶೋಭೆಯಲ್ಲ ಎಂದು ಸ್ಪೀಕರ್ ಎಚ್ಚರಿಸಿದರೂ ವಿಪಕ್ಷಗಳು ಮೋದಿ ವಿರುದ್ಧ ಘೋಷಣೆ ಕೂಗಿ ಭಾಷಣಕ್ಕೆ ಅಡ್ಡಿಪಡಿಸುತ್ತಲೇ ಇದ್ದರು.

ಆದರೆ ವಿಪಕ್ಷಗಳ ಗದ್ದಲಕ್ಕೆ ಟಾಂಗ್ ಕೊಟ್ಟ ಪ್ರಧಾನಿ ಮೋದಿ, ನನಗೆ ಕಳೆದ ಮೂರು ಅವಧಿಯಲ್ಲಿ ಇದೆಲ್ಲಾ ಅಭ್ಯಾಸವಾಗಿದೆ. 2014 ರಲ್ಲಿ ನಾನು ಮೊದಲ ಬಾರಿಗೆ ಪ್ರಧಾನಿಯಾಗಿ ಸಂಸತ್ ಗೆ ಬಂದಾಗಲೂ ವಿಪಕ್ಷಗಳು ಇದೇ ರೀತಿ ಕೂಗುತ್ತಿದ್ದರು. ಎರಡನೇ ಅವಧಿಯಲ್ಲೂ ಇದೇ ಮುಂದುವರಿದಿತ್ತು. ಈಗಲೂ ಅದೇ ಗದ್ದಲ ಮುಂದುವರಿದಿದೆ. ನನಗೆ ಗಂಟಲು ಹರಿದುಕೊಂಡು ಅಭ್ಯಾಸವಾಗಿದೆ. ನನ್ನ ಗಂಟಲಿನ ತಾಕತ್ತು ಕೂಡಾ ಹೆಚ್ಚಾಗಿದೆ. ಯಾವ ಗದ್ದಲಗಳೂ ನನ್ನ ಮಾತನ್ನು, ಕೆಲಸವನ್ನು ತಡೆಯದು ಎಂದು ವಿಪಕ್ಷಗಳತ್ತ ನೋಡಿ ಟಾಂಗ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶತಮಾನ ಕಳೆದರೂ ಹಿಂದೂಗಳು ನಿಮ್ಮನ್ನು ಕ್ಷಮಿಸಲ್ಲ: ರಾಹುಲ್ ಗಾಂಧಿಗೆ ಮೋದಿ ಛಾಟಿ