Select Your Language

Notifications

webdunia
webdunia
webdunia
webdunia

ಜಸ್ಪ್ರೀತ್ ಬುಮ್ರಾ ಬೊಂಬೆಯಂತಾ ಮಗನ ನೋಡಿ ಪ್ರಧಾನಿ ಮೋದಿ ಏನ್ಮಾಡಿದ್ರು ನೋಡಿ

Jasprit Bumrah-PM Modi
Photo Credit: X
ನವದೆಹಲಿ: ಟಿ20 ವಿಶ್ವ ಚಾಂಪಿಯನ್ ಆಗಿ ತವರಿಗೆ ಮರಳಿದ ಭಾರತೀಯ ಕ್ರಿಕೆಟಿಗರನ್ನು ಇಂದು ಪ್ರಧಾನಿ ಮೋದಿ ತಮ್ಮ ಅಧಿಕೃತ ನಿವಾಸದಲ್ಲಿ ಭೇಟಿಯಾಗಿ ಸನ್ಮಾನಿಸಿದ್ದಾರೆ.

ಇಂದು ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಟಗಾರರು ನೇರವಾಗಿ ಅಲ್ಲಿಂದ ಹೋಟೆಲ್ ಗೆ ತೆರಳಿದ್ದಾರೆ. ಬಳಿಕ ಟೀಂ ಇಂಡಿಯಾ ವಿಶೇಷ ಜೆರ್ಸಿಯಲ್ಲಿ ಪ್ರಧಾನಿ ನಿವಾಸಕ್ಕೆ ಆಗಮಿಸಿದ್ದಾರೆ. ಕೋಚ್ ರಾಹುಲ್ ದ್ರಾವಿಡ್, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ ಕೂಡಾ ಅವರಿಗೆ ಸಾಥ್ ನೀಡಿದ್ದಾರೆ.

ಟ್ರೋಫಿ ಜೊತೆಗೆ ಆಟಗಾರರೊಂದಿಗೆ ಪೋಸ್ ಕೊಟ್ಟ ಪ್ರಧಾನಿ ಮೋದಿ ಬಳಿಕ ಎಲ್ಲರನ್ನೂ ಕೂರಿಸಿಕೊಂಡು ಮಾತನಾಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಕ್ಷಣಗಳನ್ನು ಎಲ್ಲಾ ಕ್ರಿಕೆಟಿಗರೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಮೊದಲಾದ ಕ್ರಿಕೆಟಿಗರು ತಮ್ಮ ಪತ್ನಿ ಜೊತೆಗೇ ಪ್ರಧಾನಿಯನ್ನು ಭೇಟಿಯಾಗಿದ್ದಾರೆ.

ಜಸ್ಪ್ರೀತ್ ಬುಮ್ರಾ ತಮ್ಮ ಪತ್ನಿ ಸಂಜನಾ ಗಣೇಶನ್ ಮತ್ತು ಮಗ ಅಂಗದ್ ರನ್ನು ಪ್ರಧಾನಿಗೆ ಪರಿಚಯಿಸಿದ್ದಾರೆ. ಈ ವೇಳೆ ಮುದ್ದು ಅಂಗದ್ ನನ್ನು ನೋಡಿ ಖುಷಿಯಾದ ಪ್ರಧಾನಿ ಮೋದಿ ಆತನನ್ನು ಎತ್ತಿಕೊಂಡು ಮುದ್ದಿಸಿ ಫೋಟೋಗೆ ಪೋಸ್ ನೀಡಿದ್ದಾರೆ. ಅಂಗದ್ ಕೂಡಾ ಯಾವುದೇ ತಂಟೆ ತಕರಾರು ಮಾಡದೇ ಪ್ರಧಾನಿ ತೋಳಿನಲ್ಲಿ ಕೂತಿದ್ದು ನೋಡಿ ನೆಟ್ಟಿಗರು ಕ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಆಟಗಾರರ ಜೊತೆ ಪ್ರಧಾನಿ ಮೋದಿ ಸ್ಮೈಲೀ ಪೋಸ್