Publish Date: Sat, 23 Feb 2019 (12:33 IST)
Updated Date: Sat, 23 Feb 2019 (12:35 IST)
ಪ್ರೀತಿಸಿ ಮದುವೆಯಾಗಿದ್ದ ಭೂಪನೊಬ್ಬ ತನ್ನ ಗರ್ಭಿಣಿ ಪತ್ನಿಯ ಮೇಲೆಯೇ ಎಸಿಡ್ ಎರಚಿರುವ ಘಟನೆ ನಡೆದಿದೆ.
ಹಣ ನೀಡಲು ನಿರಾಕರಿಸಿದಳು ಎಂಬ ಕಾರಣಕ್ಕೆ ಪ್ರೀತಿಸಿ ಮದುವೆಯಾಗಿದ್ದ ಗರ್ಭಿಣಿಯ ಮೇಲೆ ಆಸಿಡ್ ಹಾಕಿ ಪರಾರಿಯಾಗಿರುವ ಭೂಪನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
10 ಸಾವಿರ ರೂಪಾಯಿಗೋಸ್ಕರ ಎಂಟು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಪತ್ನಿ ತಪಸಿ ಬಿಸ್ವಾತ್ ಮೇಲೆ ಗಂಡ ಚೀರಂಜಿತ್ ಬಿಸ್ವಾಸ್ ಆಸಿಡ್ ದಾಳಿ ಮಾಡಿ ಪರಾರಿಯಾಗಿದ್ದಾನೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ. ತಪಸಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಮದ್ಯದ ದಾಸನಾಗಿದ್ದ ಚೀರಂಜಿತ್ ಹಣ ನೀಡುವಂತೆ ಪತ್ನಿಯನ್ನು ಪೀಡಿಸುತ್ತಿದ್ದನು. ಆದರೆ ಪತ್ನಿ ಹಣ ಕೊಡದ ಕಾರಣ ಆಕೆಯ ಮೇಲೆ ಎಸಿಡ್ ಎರಚಿ ಪರಾರಿಯಾಗಿದ್ದಾನೆ. ಈ ಕುರಿತು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.