Webdunia - Bharat's app for daily news and videos

Install App

ಸಿಸಿಬಿ ಅಧಿಕಾರಿಗಳ ಎದುರು ಶರಣಾದ ಆರೋಪಿ ಗೀತಾ ವಿಷ್ಣು

Webdunia
ಬುಧವಾರ, 4 ಅಕ್ಟೋಬರ್ 2017 (09:42 IST)
ಬೆಂಗಳೂರು: ಪೊಲೀಸರ ಕಣ್ತಪ್ಪಿಸಿ ಮಲ್ಯ ಆಸ್ಪತ್ರೆಯಿಂದ ಪರಾರಿಯಾಗಿದ್ದ ಉದ್ಯಮಿ ದಿ. ಆದಿಕೇಶವುಲು ಮೊಮ್ಮಗ ಗೀತಾ ವಿಷ್ಣು ನಿನ್ನೆ ರಾತ್ರಿ ಸಿಸಿಬಿ ಅಧಿಕಾರಿಗಳ ಮುಂದೆ ಶರಣಾಗಿದ್ದಾನೆ.

ಸೆ. 27ರಂದು ಅಪಘಾತವೆಸಗಿದ ಬಳಿಕ ಮಲ್ಯ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ವಿಷ್ಣು, ಸೆ. 29ರಂದು ಬೆಳಗ್ಗೆ ಪೊಲೀಸರ ಕಣ್ಣು ತಪ್ಪಿಸಿ ಆಸ್ಪತ್ರೆ ಸಿಬ್ಬಂದಿ ಹಾಗೂ ತನ್ನ ಸಹೋದರಿ ಚೈತನ್ಯ ಸಹಾಯದಿಂದ ನಾಪತ್ತೆಯಾಗಿದ್ದ.

ನಾನು ಗಾಂಜಾ ಸೇವಿಸಿರಲಿಲ್ಲ. ನನ್ನ ತಂದೆ ಹೋಟೆಲ್ ನಲ್ಲಿ ನಾನೇ ಪಾರ್ಟಿ ಆಯೋಜಿಸಿದ್ದೆ. ಪಾರ್ಟಿ ಮುಗಿಸಿ ಮನೆಗೆ ಹೋಗುವಾಗ ಘಟನೆ ನಡೆದಿದೆ ಎಂದು ಆರೋಪಿ ವಿಷ್ಣು ಸಿಸಿಬಿ ಅಧಿಕಾರಿಗಳ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಕಾರಿನಲ್ಲಿ ಗಾಂಜಾ ಇತ್ತು ಎನ್ನುವ ಸುದ್ದಿ ಹರಿದಾಡಿದ್ದರಿಂದ ಹೆದರಿ ಗನ್ ಮ್ಯಾನ್ ಜತೆ ಪರಾರಿಯಾಗಿದ್ದೆ.

ಮೊದಲು ಚೆನ್ನೈಗೆ ತೆರಳಿದ್ದೆ. ನಂತರ ಅಲ್ಲಿಗೂ ಪೊಲೀಸರು ಬರುತ್ತಿರುವ ಸುದ್ದಿ ತಿಳಿದು ಮರಳಿ ಸದಾಶಿವ ನಗರಕ್ಕೆ ಬಂದಿದ್ದೆ. ನನ್ನ ಕಾರಿನಲ್ಲಿ ಗಾಂಜಾ ಇರಲಿಲ್ಲ. ನನಗೆ ಗಾಂಜಾ ಸೇವಿಸುವ ಅಭ್ಯಾಸ ಇಲ್ಲ ಎಂದು ಆರೋಪಿ ವಿಷ್ಣು ಪೊಲೀಸರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾನೆ ಎನ್ನಲಾಗುತ್ತಿದೆ. ಅಪಘಾತವಾದ ಬಳಿಕ ವಿಷ್ಣು ಕಾರಿನಲ್ಲಿ 110 ಗ್ರಾಂ ಗಾಂಜಾ ಪತ್ತೆಯಾಗಿರುವುದನ್ನು ದಕ್ಷಿಣ ವಿಭಾಗ ಡಿಸಿಪಿ ಡಾ.ಶರಣಪ್ಪ ದೃಢಪಡಿಸಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿಯನ್ನು ಭೇಟಿಯಾದ ಕರ್ನಾಟಕದ ಟ್ಯಾಕ್ಸಿ ಚಾಲಕರಿಗೆ ಹೊಸ ಭರವಸೆ

ವಿದೇಶಿ ಶಕ್ತಿಗಳ ಕೈವಾಡವೂ ಅಡಗಿರುವ ಸಾಧ್ಯತೆ: ವಿಜಯೇಂದ್ರ

ಧರ್ಮಸ್ಥಳ ಬುರುಡೆ ರಹಸ್ಯ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಣ್ಣಾಮಲೈ ಕಿಡಿ

ಸಿಎಂ ಸಿದ್ದರಾಮಯ್ಯ ಅಂದು ಕಾಮನ್‌ಸೆನ್ಸ್‌ ಯೂಸ್ ಮಾಡ್ತಿದ್ರೆ, ಈ ಪರಿಸ್ಥಿತಿಯಲ್ಲ: ಆರ್‌ ಅಶೋಕ್‌

ಹೊಸ ದಿಕ್ಕಿನತ್ತ ತನಿಖೆ, ಶಿವತಾಂಡವದ ಫೋಟೋ ಹಂಚಿಕೊಂಡ ಧರ್ಮಸ್ಥಳ

ಮುಂದಿನ ಸುದ್ದಿ
Show comments