Publish Date: Fri, 23 Feb 2018 (11:29 IST)
Updated Date: Fri, 23 Feb 2018 (11:35 IST)
ಮಂಗಳೂರು: ಉಳ್ಳಾಲ ಟಾರ್ಗೆಟ್ ಗ್ರೂಪ್‌ನ ಇಲ್ಯಾಸ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾದ ಉಳ್ಳಾಲ ಧರ್ಮನಗರ ದಾವೂದ್ ಸೇರಿ ಇತರ ಮೂವರನ್ನು ಮಂಗಳೂರು ದಕ್ಷಿಣ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ಉದ್ಯಾವರ ನಿವಾಸಿ ಮಹಮ್ಮದ್ ನಾಸಿರ್ ಹಾಗೂ ಮಂಜೇಶ್ವರ ಮಚ್ಚಂಪಾಡಿ ಸಿ.ಎಂ.ನಗರ ನಿವಾಸಿ ರಿಯಾಜ್ ಇನ್ನಿಬ್ಬರು ಆರೋಪಿಗಳು.
ದಾವೂದ್ ಇಲ್ಯಾಸ್ ಕೊಲೆ ಪ್ರಕರಣದಲ್ಲಿ ನೇರ ಭಾಗಿಯಾಗಿದ್ದ. ಮಹಮ್ಮದ್ ನಾಸಿರ್ ಹಾಗೂ ರಿಯಾಜ್ ಹಂತಕರಿಗೆ ಆಶ್ರಯ ಹಾಗೂ ಹಣಕಾಸು ಸಹಾಯ ನೀಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ