ಬೆಂಗಳೂರು: ಮೈಸೂರಿನ ಉದಯಗಿರಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕ ಬಿಜೆಪಿ, ಆಕಸ್ಮಿಕ ಗೃಹ ಸಚಿವ ಪರಮೇಶ್ವರ ಅವರೇ ಯಾವ ಬಿಲದಲ್ಲಿ ಅವಿತುಕೂತಿದ್ದೀರಿ? ಎಂದು ವ್ಯಂಗ್ಯವಾಡಿದೆ.
ಉದಯಗಿರಿ ಪೊಲೀಸ್ ಠಾಣೆ ಮೇಲೆ ಮುಸ್ಲಿಂ ಯುವಕರು ದಾಳಿ ನಡೆಸಿದ್ದರಿಂದ ಎಸಿಪಿ, ಇನ್‌ಸ್ಪೆಕ್ಟರ್ ಸೇರಿದಂತೆ 14 ಪೊಲೀಸರಿಗೆ ಗಾಯಗೊಂಡಿದ್ದಾರೆ. 10 ಕ್ಕೂ ಹೆಚ್ಚು ಪೊಲೀಸ್ ವಾಹನಗಳ ಜಖಂ ಆಗಿವೆ. ಅವಹೇಳನಕಾರಿ ಪೋಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಯಾಗಿದೆ.
ಈ ಕುರಿತು ಗೃಹ ಸಚಿವರನ್ನು ರಾಜ್ಯ ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಆರು ಚೀಲದ ತುಂಬ ಜಲ್ಲಿ ಕಲ್ಲು ಎಲ್ಲಿಂದ ಬಂತು?, ಪೂರ್ವ ಯೋಜಿತವಾಗಿಯೇ ಮತಾಂಧರು ಸಂಚು ರೂಪಿಸಿದ್ದು ಪೊಲೀಸರಿಗೆ ತಿಳಿಯಲಿಲ್ಲವೇ? ಎಂದು ಪ್ರಶ್ನಿಸಿದೆ.
ರಾತ್ರಿ 2 ಗಂಟೆಗೆ ಸಾವಿರಾರು ಜನ ಠಾಣೆ ಎದುರು ಸೇರಲು ಬಿಟ್ಟಿದ್ದೇಕೆ?, ಡಿಸಿಪಿ ಕಾರಿಗೆ ಕಲ್ಲು ತೂರಿದರೂ ಪೊಲೀಸರು ಆತ್ಮ ರಕ್ಷಣೆಗೆ ಫೈರಿಂಗ್ ಮಾಡಲಿಲ್ಲ ಏಕೆ?, ಮತಾಂಧ ಕಾಂಗ್ರೆಸ್ ಕರ್ನಾಟಕ ಸರ್ಕಾರ ಕರ್ನಾಟಕವನ್ನು ಯಾವ ಕಡೆಗೆ ಕರೆದುಕೊಂಡು ಹೋಗುತ್ತಿದೆ ಎಂದು ಕಿಡಿಕಾರಿದೆ.<>