Select Your Language

Notifications

webdunia
webdunia
webdunia
webdunia

ವಿಜಯೇಂದ್ರ ವಿರುದ್ಧ ಗುಡುಗಿದ ಯತ್ನಾಳ್‌ಗೆ ನೋಟಿಸ್‌, ಕುತೂಹಲ ಮೂಡಿಸಿದ ಹಿರಿಯ ನಾಯಕನ ನಡೆ

Karnataka BJP President BY Vijayendra, BJP MLA Basanagouda Patil Yatnal, BJP Central Disciplinary Committee

Sampriya

ಬೆಂಗಳೂರು , ಸೋಮವಾರ, 10 ಫೆಬ್ರವರಿ 2025 (19:42 IST)
Photo Courtesy X
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿ ಪಕ್ಷದ ನಿಯಾಮಾವಳಿ ವಿರುದ್ಧ ನಡೆಯುತ್ತಿದ್ದ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕೇಂದ್ರ ಶಿಸ್ತು ಸಮಿತಿ ನೋಟಿಸ್ ನೀಡಿದೆ.

ಯತ್ನಾಳ್ ನಡೆಯ ವಿರುದ್ಧ ಈ ಹಿಂದೆಯೂ ಬಿಜೆಪಿ ಕೇಂದ್ರ ಸಮಿತಿ ನೋಟಿಸ್ ನೀಡಿತ್ತು. ಅದಕ್ಕೆ ಅವರು ಉತ್ತರ ಸಹ ನೀಡಿದ್ದರು. ಈಚೆಗೆ ಬಿಜೆಪಿರ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಏಕವಚನದಲ್ಲೇ ಅಸಮಾಧಾನ ಹೊರಹಾಕುತ್ತಿದ್ದಾರೆ. ನಿರಂತವಾಗಿ ಹೇಳಿಕೆ ನೀಡುವುದನ್ನು ಮಾತ್ರ ನಿಲ್ಲಿಸಿಲ್ಲ. ಹೀಗಾಗಿ ಇಂದು ಮತ್ತೊಮ್ಮೆ ಯತ್ನಾಳ್ ಅವರಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಲಾಗಿದೆ.

ಈ ನೋಟಿಸ್ ಗೆ 72 ಗಂಟೆಗಳಲ್ಲೇ ಉತ್ತರಿಸುವಂತೆ ಯತ್ನಾಳ್ ಅವರಿಗೆ ಬಿಜೆಪಿ ಹೈಕಮಾಂಡ್ ಸೂಚಿಸಿದ್ದು, ಒಂದು ವೇಳೆ ನಿಗದಿತ ಸಮಯದಲ್ಲಿ ಉತ್ತರ ನೀಡದಿದ್ದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.

ದೆಹಲಿಯಲ್ಲಿದ್ದ ಯತ್ನಾಳ್ ಅವರು ಈಗ ಹೈದರಾಬಾದ್ ನತ್ತ ಪ್ರಯಾಣ ಬೆಳಸಿದ್ದು, ಬಿಜೆಪಿ ಶಿಸ್ತು ಸಮಿತಿ ನೀಡಿದ ನೋಟಿಸ್ ಇನ್ನೂ ಅವರ ಕೈಸೇರಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಮುಡಾ ಹಗರಣ: ಸಿಎಂ ಪತ್ನಿ ಪಾರ್ವತಿ, ಭೈರತಿ ಸುರೇಶ್‌ಗೆ ತಾತ್ಕಾಲಿಕ ರಿಲೀಫ್‌