Select Your Language

Notifications

webdunia
webdunia
webdunia
webdunia

ಪತ್ರಕರ್ತೆಯರ ಅಹವಾಲು ಸ್ವೀಕರಿಸಿ ಧೈರ್ಯ ತುಂಬಿದ ಡಿಸಿಎಂ

ಪತ್ರಕರ್ತೆಯರ ಅಹವಾಲು ಸ್ವೀಕರಿಸಿ ಧೈರ್ಯ ತುಂಬಿದ  ಡಿಸಿಎಂ
ಬೆಂಗಳೂರು , ಗುರುವಾರ, 14 ಮೇ 2020 (20:57 IST)
ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕೊಳಗಾಗಿರುವ ಪತ್ರಕರ್ತೆಯರ ಅಹವಾಲುಗಳನ್ನು ಡಿಸಿಎಂ ಆಲಿಸಿದ್ದಾರೆ.

ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅಹವಾಲು ಸ್ವೀಕರಿಸಿ, ಮಾನಸಿಕ ಸ್ಥೈರ್ಯ ತುಂಬಿದರು. ಲಾಕ್ ಡೌನ್ ಹಿನ್ನೆಲೆಯಿಂದ ಪತ್ರಕರ್ತೆಯರು ಬಾಧಿತರಾಗಿದ್ದು, ಅವರಿಗೆ ಸರ್ಕಾರ  ನೆರವಾಗಬೇಕು.  ಅನಿವಾರ್ಯವಾಗಿ ಇತರೆ ವೃತ್ತಿಪರರಂತೆ ಪತ್ರಕರ್ತೆಯರು ಮನೆಯಿಂದಲೇ ಕಾರ್ಯನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಪೂರಕ ಪರಿಕರಗಳನ್ನು ಒದಗಿಸಬೇಕು.  ಸಾಮಾಜಿಕ ಪಿಡುಗುಗಳ ನಿವಾರಣೆಗಾಗಿ ಕಾರ್ಯಾಗಾರ, ಶಿಬಿರ, ಕ್ಷೇತ್ರ ಪ್ರಾತ್ಯಾಕ್ಷಿಕೆಗಳನ್ನು ಕರ್ನಾಟಕ ಪತ್ರಕರ್ತೆಯರ ಸಂಘವು  ಆಯೋಜಿಸಲು ಸಮಾಜ ಕಲ್ಯಾಣ ಇಲಾಖೆಯು ಸಹಭಾಗಿತ್ವ ನೀಡಬೇಕು.

ವೃತ್ತಿ ಪರ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ, ಕೋರ್ಸುಗಳನ್ವಯ ವೃತ್ತಿಪರ ಕೋರ್ಸುಗಳನ್ನು  ಕರ್ನಾಟಕ ಪತ್ರಕರ್ತೆಯರ ಸಂಘದ ಸಹಭಾಗಿತ್ವದಲ್ಲಿ ಆಯೋಜಿಸಬೇಕು. ಅಗತ್ಯ ಬೆಂಬಲ ನೀಡಿದರೆ ಪತ್ರಕರ್ತೆಯರು ಮುಂಬರುವ ದಿನಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ  ಕಾರ್ಯಶೀಲರಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ ಎಂದು ಸಂಘದ ಪದಾಧಿಕಾರಿಗಳು ನೀಡಿದ ಮನವಿಗೆ ಡಿಸಿಎಂ ಪೂರಕವಾಗಿ ಸ್ವಂದಿಸಿದರು.

ಪತ್ರಕರ್ತೆಯರು ವೃತ್ತಿಪರತೆಯಿಂದ ಕಾರ್ಯನಿರ್ವಹಿಸಲು ಅನುಕೂಲವಾಗುವಂತಹ ಕಾರ್ಯಾಗಾರಗಳನ್ನು ಆಯೋಜಿಸಲು ನೆರವು ನೀಡಲಾಗುತ್ತದೆ. ಸಂಘದ ಕಾರ್ಯಚಟುವಟಿಕೆಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಅವರು ತಿಳಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

80 ವರ್ಷದ ವೃದ್ಧೆಗೆ ಕೊರೊನಾ ಬಂದಿದ್ದು ಅಚ್ಚರಿ