Publish Date: Sat, 06 Oct 2018 (15:26 IST)
Updated Date: Sat, 06 Oct 2018 (15:29 IST)
ಭ್ರಷ್ಟರ ಬೇಟೆಗೆ ಮುಂದಾಗಿರುವ ಎಸಿಬಿ ಅಧಿಕಾರಿಗಳು ಎಸಿಎಫ್ ಅಧಿಕಾರಿ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಬೆಳಗಾವಿಯ ಖಾನಾಪುರ ಎಸಿಎಫ್ ಚಂದ್ರಗೌಡ ಪಾಟೀಲ್ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ.
ದಾಳಿ ವೇಳೆ ಬೆಂಗಳೂರಿನಲ್ಲಿ ಮಗನ ಹೆಸರಿನಲ್ಲಿದ್ದ ಆಸ್ತಿ ಪತ್ರ, ಯರಗಟ್ಟಿಯಲ್ಲಿ 13 ಗುಂಟೆ ಜಾಗದಲ್ಲಿ ಸಿಮೆಂಟ್ ಬ್ಲಾಕ್ ತಯಾರಿಕಾ ಘಟಕದ ಆಸ್ತಿ ಪತ್ರ, ಬೆಳಗಾವಿಯ ಹಿಂಡಲಗಾ ಜೈಲು ಬಳಿಯ ಆಸ್ತಿ ಪತ್ರ ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ಪತ್ರ ಜಪ್ತಿಯಾಗಿದೆ. ಎಸಿಎಫ್ ಮನೆಗೆ ಎಸಿಬಿ ಎಸ್ಪಿ ಅಮರನಾಥ ರೆಡ್ಡಿ ನೇತೃತ್ವದ ತಂಡ ಭೇಟಿ ನೀಡಿ ತನಿಖೆ ನಡೆಸುತ್ತಿದೆ.
ಬೆಳಗಾವಿಯ ರಾಮತೀರ್ಥ ನಗರದ ಮನೆ ಭೇಟಿ ಪರಿಶೀಲನೆ ನಡೆಯುತ್ತಿದೆ. ದಾಳಿವೇಳೆ ಸಿಕ್ಕಿರುವ ಚಿನ್ನಾಭರಣ, ಹಣ ಮತ್ತು ದಾಖಲೆಗಳ ಬಗ್ಗೆ ವಿಚಾರಣೆ ಮಾಡಲಾಗಿದೆ. ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಆರೋಪ ಮೇಲೆ ಎಸಿಬಿ ದಾಳಿ ನಡೆಸಿತ್ತು. ಎಸಿಬಿ ಅಧಿಕಾರಿಗಳ ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರೆದಿದೆ.