Publish Date: Tue, 02 Oct 2018 (18:04 IST)
Updated Date: Tue, 02 Oct 2018 (18:11 IST)
ನನ್ನ ಮಾತು ಕೇಳದಿದ್ದರೆ ನೀನೇನೂ ಕೀಳೋಕೆ ಇಲ್ಲಿರ್ತಿಯಾ ಮೊಮ್ಮಗನೆ? ಹೀಗಂತ ಮ್ಯಾನೇಜರ್ ಒಬ್ಬರಿಗೆ ಶಾಸಕ ಓಪನ್ ಆಗಿ ಧಮ್ಕಿ ಹಾಕಿದ ಘಟನೆ ನಡೆದಿದೆ.
ಸಾರಿಗೆ ಇಲಾಖೆ ಡಿಪೊ ಮ್ಯಾನೇಜರ್ ಗೆ ರಾಯಭಾಗ ಶಾಸಕರಿಂದ ಓಪನ್ ಧಮ್ಕಿ ಹಾಕಿದ ಘಟನೆ ನಡೆದಿದೆ.
ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ರಾಯಭಾಗ ಕೇಂದ್ರ ಬಸ್ ನಿಲ್ದಾಣದಲ್ಲಿ ಮ್ಯಾನೇಜರ್ ನನ್ನು ಅವಾಚ್ಯ ಶಬ್ದಗಳಿಂದ ತರಾಟೆಗೆ ತೆಗೆದುಕೊಂಡರು.
ನೀವು ಹಣ ತಿನ್ನಲಿ, ಬಿಡಲಿ. ನೀವು ಹಣ ತಿಂದಿದ್ದೀರಿ ಅಂತ ಡಿಸಿಗೆ ನಾನು ಕಂಪ್ಲೆಂಟ್ ಕೊಡ್ತಿನಿ ಎಂದು ರಾಯಭಾಗ ಶಾಸಕ ದುರ್ಯೋಧನ ಐಹೊಳೆಯಿಂದ ಡಿಪೊ ಮ್ಯಾನೇಜರ್ಗೆ ಓಪನ್ ಆವಾಜ್ ಹಾಕಲಾಗಿದೆ.
ಜನರ ನಡುವೆ ಡಿಪೋ ಮ್ಯಾನೇಜರ್ ಎ. ಆರ್. ಚಬ್ಬಿ ಅವರನ್ನು ಶಾಸಕ ದುರ್ಯೋಧನ ಹೊಡೆಯಲೆತ್ನಿಸಿದ ಘಟನೆಯೂ ನಡೆಯಿತು.
ದುರ್ಯೋಧನ ಅವತಾರ ಕಂಡು ಸಾರಿಗೆ ಇಲಾಖೆ ಅಧಿಕಾರಿಗಳು ತಬ್ಬಿಬ್ಬುಗೊಂಡರು. ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ತೆರವುಗೊಳಿಸದೆ ಇದ್ದದ್ದಕ್ಕೆ ಶಾಸಕರ ಪಿತ್ತ ನೆತ್ತಿಗೆ ಏರಲು ಕಾರಣವಾಗಿತ್ತು. ನಾವು ಹೊಯ್ಕೊಂಡು ಕಸ ಹೊಡೆಯಲ್ಲಿಕ್ಕೆ ಬಂದರೆ ನೀವು ಆರಾಮಾಗಿ ಬನ್ನಿ ಅಂತ ಆವಾಜ್ ಹಾಕಿದರು. ರಾಯಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.