Select Your Language

Notifications

webdunia
webdunia
webdunia
webdunia

ಮಠಾಧೀಶರ ಕುರಿತು ಸಾಹಿತಿ ಬಿ.ಎಲ್.ವೇಣು ವ್ಯಂಗ್ಯವಾಡಿದ್ದು ಹೇಗೆ ಗೊತ್ತಾ?

ಮಠಾಧೀಶರ ಕುರಿತು ಸಾಹಿತಿ ಬಿ.ಎಲ್.ವೇಣು  ವ್ಯಂಗ್ಯವಾಡಿದ್ದು ಹೇಗೆ ಗೊತ್ತಾ?
ಚಿತ್ರದುರ್ಗ , ಸೋಮವಾರ, 15 ಅಕ್ಟೋಬರ್ 2018 (12:33 IST)
ಮಠಾಧೀಶರ ಬಗ್ಗೆ ಸಾಹಿತಿ ಬಿ.ಎಲ್.ವೇಣು  ವ್ಯಂಗ್ಯವಾಡಿದ್ದು, ಈ ಕುರಿತು ಪರ ಹಾಗೂ ವಿರೋಧ ಟೀಕೆಗಳು ವ್ಯಕ್ತವಾಗುತ್ತಿವೆ.

ಚಿತ್ರದುರ್ಗದಲ್ಲಿ ಏನಾಗದಿದ್ದರೂ ಊರತುಂಬ ಮಠಗಳಾಗಿವೆ. ಜಾತಿಗೊಂದು ಮಠಗಳಾದ ಮೇಲೆ ಜಾತಿ ವಿನಾಶ ಸಾಧ್ಯವೆ? ಜಾತಿ ಮಠಗಳಿಂದ ಆಯಾ ಸಮುದಾಯಗಳು ಉದ್ಧಾರ ಆಗಿವೆಯೇ? ಸ್ವಾಮಿಗಳಿಗೆ ಸ್ವಾಮಿ ಎಂಬುದೊಂದು  ಉದ್ಯೋಗ ಸಿಕ್ಕಿದೆ. ಹೀಗಂತ ಸಾಹಿತಿ ಬಿ.ಎಲ್.ವೇಣು ವ್ಯಂಗ್ಯವಾಡಿದ್ದಾರೆ.

ಮುಖ್ಯಮಂತ್ರಿ ಅಧಿಕಾರದಿಂದ ಕೆಳಗೆ ಇಳಿಸಿದರೆ ಹುಷಾರು ಅಂತ ಹೇಳುವ ಜಾತಿ ಸ್ವಾಮಿ ಇದಾರೆ. ರಾಜಕಾರಣಿಯೊಬ್ಬ ಜೈಲಿಗೆ ಹೋದರೆ ಮಾತಾಡಿಸೋಕೆ ಹೋಗುವ ಸ್ವಾಮಿ ಇದಾರೆ. ಜೈಲಿಂದ ಬಂದಾಗ ಹೂ ಮಾಲೆ ಹಾಕಿ ಸ್ವಾಗತಿಸಲು ಹೋಗುವ ಸ್ವಾಮಿ ಇದಾರೆ. ಮೇಲ್ವರ್ಗದ ಮಠಗಳಿಗೆ ಹಣ ನೀಡಿ ನಮಗೇಕೆ ಕೊಡಲ್ಲ ಎಂದ ಓಬಿಸಿ ಸ್ವಾಮಿ ಇದಾರೆ. ಓಬಿಸಿ ಸ್ವಾಮಿಗಳ ಒಕ್ಕೂಟವೂ ನಮ್ಮಲ್ಲಿದೆ ಎಂದು ಬಿ.ಎಲ್.ವೇಣು ಟೀಕೆ ಮಾಡಿದ್ದಾರೆ.
ಗೋ ಸ್ವಾಮಿ, ರೇಪಿಸ್ಟ್ ಸ್ವಾಮಿ, ಪಾಪಿಸ್ಟ್ ಸ್ವಾಮಿಗಳಿದ್ದಾರೆ. ಇನ್ನೋರ್ವ ಸ್ವಾಮಿ ನಮ್ಮ ಜಾತಿಯವ್ರಿಗೇ ಸಿನೆಮಾದ ಹಿರೋ ಮಾಡಿ ಅಂತ ಬಾಯಿಬಡ್ಕೋತಾನೆ. ಇವರೆಲ್ಲಾ ಸ್ವಾಮಿಗಳಾ, ಬಸವ ತತ್ವ ಪರಿಪಾಲಕರಾ? ಕಾವಿ ಹಾಕಿದರೂ ಆಸೆ ಬಿಡಲಿಲ್ಲ, ಜಾತಿ ಬಿಡಲಿಲ್ಲ ಎಂದಿದ್ದಾರೆ.

ಸರ್ವ ಸಂಗ ಪರಿತ್ಯಾಗಿಗಳೆಂದು ಹೇಳಿ ಎಸಿ ರೂಮು, ಕಾರುಗಳಲ್ಲಿ ಮೆರೀತಾರೆ. ಸ್ವಾಮಿಗಳು ದುಡಿಯದೇ ದುಡ್ಡು ಮಾಡುತ್ತಿದ್ದಾರೆ. ಬಡವರಿಗೆ ಸರ್ಕಾರ ಅಕ್ಕಿ ಕೊಟ್ಟರೆ ಉರುಕೊಳ್ತಾರೆ. ಇಲ್ಲಿ ಚುನಾವಣೆ ಬಂದರೆ ಮಠಗಳದ್ದೇ ಪಾರುಪತ್ಯ. ಎಲೆಕ್ಷನ್ ನಿಲ್ಲಿಸಿ ಗೆದ್ದುಕೊಳ್ಳುವ ಸಮರ್ಥ, ಲಾಭಕೋರ ಸ್ವಾಮಿಗಳಿದ್ದಾರೆ. ಎಲ್ಲರೂ ಹಾಗಲ್ಲ, ಒಳ್ಳೆ ಸ್ವಾಮಿಗಳೂ ಇದ್ದಾರೆ, ಈ ಮಾತು ನನಗೆ ನಿರೀಕ್ಷಣಾ ಜಾಮೀನು ಎಂದೂ ಹೇಳಿದರು.

ದೇವರು, ಜಾತಿ, ಧರ್ಮ, ಮಠ ಬಿಟ್ಟರೆ ಬದುಕು ನೆಮ್ಮದಿಯಾಗಿರುತ್ತದೆ ಎಂದು ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಸಾಹಿತಿ ಬಿ.ಎಲ್.ವೇಣು ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗ ನಗರದ ತ.ರಾ.ಸು ರಂಗಮಂದಿರದಲ್ಲಿ ನಡೆದ ಸಾಹಿತ್ಯ ಸಂವಾದದಲ್ಲಿ ವೇಣು ಮಾತುಗಳು ಟೀಕೆಗೆ ಕಾರಣವಾಗುತ್ತಿವೆ.




Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಊರಿಗೆ ಹೋಗುತ್ತಿದ್ದವ ಮಸಣ ಸೇರಿದ!