Select Your Language

Notifications

webdunia
webdunia
webdunia
webdunia

ತೂಕ ಇಳಿಸಲು ಹೋಗಿ ಜೀವ ಕಳೆದುಕೊಂಡ ಯುವತಿ

ತೂಕ ಇಳಿಸಲು ಹೋಗಿ ಜೀವ ಕಳೆದುಕೊಂಡ ಯುವತಿ
ಮುಂಬೈ , ಮಂಗಳವಾರ, 11 ಫೆಬ್ರವರಿ 2020 (08:54 IST)
ಮುಂಬೈ : ಯುವತಿಯೊಬ್ಬಳು ತೂಕ ಇಳಿಸುವ ಸಲುವಾಗಿ ನಿಷೇಧಿತ ಮಾತ್ರೆ ಸೇವನೆ ಮಾಡಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.


ಮೇಘನಾ ದೇವಗಡ್ಕರ್ (22) ಮೃತಪಟ್ಟ ಯುವತಿ. ಈಕೆ ಡ್ಯಾನ್ಸರ್ ಹಾಗೂ ಜಿಮ್ ಟ್ರೈನರ್ ಆಗಿದ್ದಳು. ಈಕೆ ತೂಕ ಇಳಿಸಿಕೊಳ್ಳಲು ನಿಷೇಧಿತ ಡೈನಿಟ್ರೋಫೆನಾಲ್ ಎಂಬ ಮಾತ್ರೆ ಸೇವಿಸಿದ್ದು, ಅದನ್ನು ಸೇವಿಸಿದ ಕೆಲ ಹೊತ್ತಿನಲ್ಲೇ ಆಕೆ ವಾಂತಿ ಮಾಡಿಕೊಂಡಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಹೃದಯ ಬಡಿತ ಹೆಚ್ಚಾಗಿ ಹಾಗೂ ಅಧಿಕ ರಕ್ತದೊತ್ತಡದಿಂದ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನಪ್ಪಿದ್ದಾಳೆ. 


ಸದ್ಯ ಈ ಬಗ್ಗೆ ನೌಪಾಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇವಿ ಜಾತ್ರೆ ಮುಗಿಸಿ ಬರುವಾಗಲೇ ನಡೆದಿದೆ ಇಂತಹ ದುರಂತ