Publish Date: Sat, 04 Jul 2020 (17:02 IST)
Updated Date: Sat, 04 Jul 2020 (17:04 IST)
ಲವ್ ಮಾಡಿದ್ದ ಜೋಡಿಯ ಮದುವೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೊಪ್ಪಳದ ಕುಷ್ಟಗಿ ತಾಲೂಕಿನ ಜೆ. ರಾಂಪುರದಲ್ಲಿ ಘಟನೆ ನಡೆದಿದ್ದು, ಯುವ ಪ್ರೇಮಿಗಳಾದ ಹುಲಿಗೆಮ್ಮ, ವಿರುಪಾಕ್ಷಗೌಡ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ಎರಡ್ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಇವರ ಮದುವೆಗೆ ಜಾತಿ ಬೇರೆ ಆಗಿದ್ದರಿಂದ ವಿರೋಧ ವ್ಯಕ್ತವಾಗಿತ್ತು ಎನ್ನಲಾಗಿದೆ.