Publish Date: Tue, 02 Aug 2022 (19:33 IST)
Updated Date: Tue, 02 Aug 2022 (19:38 IST)
ದೊಣ್ಣೆಯಿಂದ ಹೊಡೆದು ಮಹಿಳೆಯನ್ನು ಕೊಲೆ ಮಾಡಿದ ಘಟನೆ ಆನೇಕಲ್ ತಾಲೂಕಿನ ಲಕ್ಷ್ಮಿ ಸಾಗರದಲ್ಲಿ ನಡೆದಿದೆ. ತಮಿಳುನಾಡಿನ ಡೆಂಕಣಿಕೋಟೆ ಮೂಲದ ಮಾದಮ್ಮ ಎಂಬ ಮಹಿಳೆಯು ಕೊಲೆಯಾಗಿದ್ದು, ಪತಿ ತೀರಿಕೊಂಡ ಬಳಿಕ ಮಾದಮ್ಮ ತಮಿಳುನಾಡಿನಿಂದ ಲಕ್ಷ್ಮಿ ಸಾಗರಕ್ಕೆ ಬಂದು ವಾಸವಿದ್ದಳು. ಇತ್ತೀಚೆಗೆ ಮಣಿ ಎಂಬುವರ ಜೊತೆ ಲಕ್ಷ್ಮಿ ಸಾಗರದ ಮನೆಯಲ್ಲಿ ವಾಸವಾಗಿದ್ದರು. ಇಬ್ಬರು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ನಿನ್ನೆ ಮಧ್ಯಾಹ್ನ ಇಬ್ಬರ ಮಧ್ಯೆ ಗಲಾಟೆ ಆಗಿತ್ತು.. ಈ ವೇಳೆ ಮಣಿ ದೊಣ್ಣೆಯಿಂದ ಹೊಡೆದು ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಡಿ ವೈ ಎಸ್ ಪಿ ಮಲ್ಲೇಶ್ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ..ಈ ಸಂಬಂಧ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.