Publish Date: Sun, 23 Feb 2020 (15:18 IST)
Updated Date: Sun, 23 Feb 2020 (15:19 IST)
ಕುಡಿಯೋಕೆ ನೀರು ಕೊಡಿ ಅಂತ ನಡುರಾತ್ರಿ ಮನೆಗೆ ಬರೋ ದುಷ್ಕರ್ಮಿಗಳು ಮಹಿಳೆಯೊಬ್ಬಳನ್ನು ಕಿಡ್ನಾಪ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಘಟನೆ ನಡೆದಿದ್ದು ಮಹಿಳೆಯರನ್ನು ಕಿಡ್ನಾಪ್ ಮಾಡ್ತಿರೋ ಗ್ಯಾಂಗ್ ಹುಟ್ಟಿಕೊಂಡಿದೆಯಾ ಅನ್ನೋ ಅನುಮಾನ ಜನರನ್ನು ಕಾಡಲಾರಂಭಿಸಿದೆ.
ಕಳೆದೆರಡು ವಾರಗಳಿಂದ ನಡುರಾತ್ರಿ 12 ಗಂಟೆಗೆ ನೀರು ಕೇಳೋ ನೆಪದಲ್ಲಿ ಗಾರ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಅನಿತಾ ಎಂಬ ಗೃಹಿಣಿಯನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಿದ್ದಾರೆ. ಇದನ್ನು ತಡೆಯೋಕೆ ಹೋದ ಅನಿತಾಳ ಗಂಡನ ಮೇಲೆ ಹಲ್ಲೆ ನಡೆಸಿದ್ದಾರೆ.
ಯಲಹಂಕ ಪೊಲೀಸರು ತನಿಖೆಯನ್ನು ಕೈಗೊಂಡಿದ್ದು, ಹಣಕ್ಕಾಗಿ ಈ ಕಿಡ್ನಾಪ್ ನಡೆದಿರಬಹುದು ಅಂತ ಮೇಲ್ನೋಟಕ್ಕೆ ಶಂಕೆ ವ್ಯಕ್ತಪಡಿಸಲಾಗಿದೆ.