ರಾಯಚೂರು: ಮಂತ್ರಾಲಯ ಶ್ರೀಗುರು ರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾಗಿದ್ದು, ಕಳೆದ ಒಂದು ತಿಂಗಳಲ್ಲಿ ₹3.38 ಕೋಟಿ ಕಾಣಿಕೆ ಸಂಗ್ರಹವಾಗಿದೆ.
ಕರ್ನಾಟಕ, ಆಂಧ್ರಪ್ರದೇಶದ ಶಕ್ತಿ ಯೋಜನೆ ಪ್ರಭಾವದಿಂದ ಮಂತ್ರಾಲಯದ ರಾಯರ ಮಠಕ್ಕೆ ಹೆಚ್ಚಿನ ಕಾಣಿಕೆ ಹರಿದು ಬಂದಿದೆ. ದಸರಾ ರಜೆ, ಹಬ್ಬದ ಹಿನ್ನೆಲೆ ಮಂತ್ರಾಲಯ ಮಠಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿದೆ.
ಒಟ್ಟು ಕಾಣಿಕೆಯಲ್ಲಿ ₹ 3.30 ಕೋಟಿ ನೋಟುಗಳು, ₹7.44 ಲಕ್ಷ ನಾಣ್ಯಗಳು ಸಂಗ್ರಹವಾಗಿದೆ. ಕಾಣಿಕೆಯಲ್ಲಿ ಹಣದ ಜೊತೆ 136 ಗ್ರಾಂ ಚಿನ್ನ, 1180 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ.
ಮಠದ ನೂರಾರು ಜನ ಸಿಬ್ಬಂದಿ, ಕರಸೇವಕರು ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು ಎಂದು ರಾಯರ ಮಠದ ಆಡಳಿತ ಮಂಡಳಿ ತಿಳಿಸಿದೆ.