ವಿಚಿತ್ರವಾಗಿ ಆತ್ಮಹತ್ಯೆ ಮಾಡ್ಕೊಂಡ ಟೆಕ್ಕಿ

Webdunia
ಬುಧವಾರ, 21 ಡಿಸೆಂಬರ್ 2022 (19:53 IST)
ಬೆಂಗಳೂರಿನಲ್ಲಿ ವಾಸವಾಗಿದ್ದ 51 ವರ್ಷದ ಟೆಕ್ಕಿಯೊಬ್ಬರು ತಮ್ಮ ಕಾರ್​ನಲ್ಲಿ ವಿಚಿತ್ರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ ಟೆಕ್ಕಿ ಉಸಿರು ಚೆಲ್ಲಿದ್ದಾರೆ. ಈ ಘಟನೆ ಮಹಾಲಕ್ಷ್ಮಿ ಲೇಔಟ್​​ನ ಕುರುಬರಹಳ್ಳಿ ಜಂಕ್ಷನ್ ಬಳಿ ನಡೆದಿದೆ. 51 ವರ್ಷದ ವಿಜಯ್ ಕುಮಾರ್ ಆತ್ಮಹತ್ಯೆಗೆ ಶರಣಾದ ಟೆಕ್ಕಿ. ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯ್ ಕುಮಾರ್ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ವಿಜಯ್ ಕುಮಾರ್ ಸಾಫ್ಟ್​ವೇರ್ ಇಂಜಿನಿಯರ್ ಆಗಿ ನಗರದ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ವಿಜಯ್ ಕುಮಾರ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಆತ್ಮಹತ್ಯೆ ಮಾಡಿಕೊಳ್ಳಲು ನೈಟ್ರೋಜನ್ ಸಿಲಿಂಡರ್ ಖರೀದಿ ಮಾಡಿದ್ದಾರೆ. ನೈಟ್ರೋಜನ್ ಅನಿಲ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಸ್ತೆ ಬದಿ ಕಾರ್ ನಿಲ್ಲಿಸಿದ ವಿಜಯ್ ಕುಮಾರ್ ಸಾರ್ವಜನಿಕರ ಸಹಾಯದಿಂದ ವಾಹನಕ್ಕೆ ಕವರ್ ಹಾಕಿದ್ದಾರೆ. ನಂತರ ಒಳಗೆ ಹೋಗಿ ಕಾರ್ ಹಿಂಬದಿ ಸೀಟ್​ನಲ್ಲಿ ಕುಳಿತಿದ್ದಾರೆ. ಮುಖಕ್ಕೆ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡು ನೈಟ್ರೋಜನ್ ಗ್ಯಾಸ್ ಹಾಯಿಸಿಕೊಂಡಿದ್ದಾರೆ. ಅನುಮಾನ ಬಂದು ಸಾರ್ವಜನಿಕರು ಮಹಾಲಕ್ಷ್ಮಿ ಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಜಯ್ ಕುಮಾರ್ ತಮ್ಮ ನೋವಿನ ಬಗ್ಗೆ ಮನೆಯವರ ಜೊತೆಗೂ ಚರ್ಚಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅನಾರೋಗ್ಯದಿಂದ ಸಾವಿನ ದಾರಿ ಹುಡುಕುತ್ತಾ ಸಾಗಿದ ಟೆಕ್ಕಿ ವಿಚಿತ್ರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಯುಡಿಆರ್ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಂಗೆ ಹೆಂಡ್ತಿ, ಮಗು ಇದೆ ಸಾರ್.. ರೈಲ್ವೇ ಸ್ಟೇಷನ್ ನಲ್ಲಿ ಕಳ್ಳತನ ಮಾಡುತ್ತಿದ್ದವನು ಸಿಕ್ಕಿಬಿದ್ದ ತಕ್ಷಣ ವರಸೆಯೇ ಚೇಂಜ್ Video

Video: ಮಂಗಳೂರು ಮಹಾಮಳೆ ದುರಂತ:ತಾಯಿ ಮತ್ತು ಇಬ್ಬರು ಹೆಣ್ಣುಮಕ್ಕಳು ಸಾವು, ಕಣ್ಣೀರು ತರಿಸಿದ NDRF ಕಾರ್ಯಾಚರಣೆ

Karnataka Weather: ಇಂದು ಈ ಜಿಲ್ಲೆಗಳಿಗೆ ಮತ್ತಷ್ಟು ತೀವ್ರವಾಗಲಿದೆ ಮಳೆ

ರಾಜಕಾರಣದಲ್ಲಿ ಇಂತಹ ಘಟನೆಗಳು ಸಾಮಾನ್ಯ, ಧೃತಿಗೆಡಬೇಡಿ: ಪ್ರದೀಪ್ ಈಶ್ವರ್‌ಗೆ ಸಿದ್ಧರಾಮಯ್ಯ ಧೈರ್ಯ

ರೆಸ್ಟೋರೆಂಟ್‌ನ ಚಿಮಿಣಿಯಲ್ಲಿ ಸಂಗ್ರಹವಾದ ಎಣ್ಣೆಯಿಂದ ಬೆಂಕಿ, ದೆಹಲಿಯಲ್ಲಿ ತಪ್ಪಿದ ದೊಡ್ಡ ಅವಘಡ, Video

ಮುಂದಿನ ಸುದ್ದಿ
Show comments