Select Your Language

Notifications

webdunia
webdunia
webdunia
webdunia

ಟ್ರಾಫಿಕ್ ನಿಯಂತ್ರಣಗೊಳಿಸಲು ಕೆಲ ಬದಲಾವಣೆಗೆ ಮುಂದಾಗಿರುವ ಸ್ಪೆಷಲ್ ಕಮಿಷನರ್

ಟ್ರಾಫಿಕ್ ನಿಯಂತ್ರಣಗೊಳಿಸಲು ಕೆಲ ಬದಲಾವಣೆಗೆ ಮುಂದಾಗಿರುವ ಸ್ಪೆಷಲ್ ಕಮಿಷನರ್
bangalore , ಶುಕ್ರವಾರ, 25 ನವೆಂಬರ್ 2022 (18:07 IST)
ಹೆಬ್ಬಾಳದ ಫ್ಲೈಓವರ್ ಬಳಿ ಟ್ರಾಫಿಕ್ ದಟ್ಟಣೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೆಂಗಳೂರು ನಗರ ಸಂಚಾರ ವಿಭಾಗ ವಿಶೇಷ ಆಯುಕ್ತ ಡಾ.ಎಂ.ಎ. ಸಲೀಂ ಕ್ರಮಕೈಗೊಂಡಿದ್ದು,ಕಳೆದ ಒಂದು ವಾರದಿಂದ ಗೂಡ್ಸ್ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ.ಹೆವಿ ಮತ್ತು ಲಘು ಗೂಡ್ಸ್ ವಾಹನಗಳ ನಿರ್ಬಂಧದಿಂದ ಟ್ರಾಫಿಕ್ ಸುಧಾರಣೆಯಾಗಿದೆ.ಗೂಡ್ಸ್ ವಾಹನಗಳ ನಿರ್ಬಂಧಿಂದ ಶೇಕಡಾ 25% ಸಂಚಾರ ದಟ್ಟಣೆಗೆ ಬ್ರೇಕ್ ಬಿದ್ದಿದೆ ಎಂದು ಹೇಳಿದ್ದಾರೆ.
 
ಇನ್ನೂ ಸಂಚಾರ ದಟ್ಟಣೆಯಿಂದ ಸುಮಾರು 20 ನಿಮಿಷ ವ್ಯರ್ಥವಾಗುತ್ತಿತ್ತು.ಈಗ ಆ ಸಮಯ ಏಳು ನಿಮಿಷಕ್ಕೆ ಇಳಿದಿದೆ ಎಂದು ಪೊಲೀಸರು ಹರ್ಷ ವ್ಯಕ್ತಪಡಿಸಿದಾರೆ.ಅಲ್ಲದೇ ಇನ್ನೂ ಕಡಿಮೆ ಮಾಡಲು ಪ್ರಯತ್ನ ಮಾಡ್ತೇವೆ ಎಂದು ಸಂಚಾರ ವಿಭಾಗದ ಸ್ಪೆಷಲ್ ಕಮೀಷನರ್ ಸಲೀಂ ಹೇಳಿದ್ದು,ಹೆಬ್ಬಾಳ ರೀತಿಯಲ್ಲಿ ನಗರದ ಬೇರೆ ಭಾಗಗಳ ಟ್ರಾಫಿಕ್ ದಟ್ಟಣೆ ಬಗ್ಗೆ ಅಧ್ಯಯನ ಮಾಡ್ತಿದೇವೆ.ಕೆಲವು ಟ್ರಾಫಿಕ್ ಮ್ಯಾನೇಜ್ಮೆಂಟ್‌ ಸಂಬಂಧ ಸಮಸ್ಯೆ ಇದೆ.ಇನ್ನೂ ಕೆಲವು ಇಂಜಿನಿಯರಿಂಗ್ ಸಂಬಂಧಿತ ಸಮಸ್ಯೆ ಇದೆ.ಅದನ್ನ ಸರಿಪಡಿಸುವ ಕೆಲಸಕ್ಕೆ ಚರ್ಚೆ ನಡೆದಿದೆ.ನಗರದಲ್ಲಿ ಅಲ್ಲಿನ ಸ್ಥಳೀಯ ಟ್ರಾಫಿಕ್ ಅಧ್ಯಯನ ಮಾಡಿ ಅಲ್ಲಿ ಬದಲಾವಣೆ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಸ್ಪೇಷಲ್ ಕಮಿಷನರ್ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಜನರ ಜೀವ ಬಲಿ ಪಡೆಯುತ್ತಿರುವ ಕಿಲ್ಲರ್ ರಸ್ತೆ ಗುಂಡಿಗಳು