Select Your Language

Notifications

webdunia
webdunia
webdunia
webdunia

ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟಾಚಾರಿಗಳು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕಿಡಿ

A spark to Siddaramaiah's statement that Lingayat Chief Ministers are corrupt
bangalore , ಭಾನುವಾರ, 23 ಏಪ್ರಿಲ್ 2023 (20:40 IST)
ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟಾಚಾರಿಗಳು ಎಂಬ ಸಿದ್ದರಾಮಯ್ಯ ಹೇಳಿಕೆಗೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.ಇದು ವೀರಶೈವ ಲಿಂಗಾಯತ ಸಮೂದಾಯಕ್ಕೆ ಧಕ್ಕೆ ತರುವಂತಹ ಕೆಲಸಮಈ ಹಿಂದೆ ವೀರಶೈವ ಲಿಂಗಾಯತ ಸಮೂದಾಯಗಳನ್ನು ಒಡೆದು, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ರು.ಇದನ್ನು ನಾವು ಮರೆತಿಲ್ಲ.ಈಗ ಮತ್ತೆ ಚುನಾವಣಾ ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ಹೊರಹಾಕ್ತಾ ಇದ್ದೀರಿ.ಇದು ವೀರಶೈವ ಲಿಂಗಾಯತ ಸಮೂದಾಯಕ್ಕೆ ಮಾಡಿದ ಬಹುದೊಡ್ಡ ದ್ರೋಹ.ನೀವು ಅಭ್ಯರ್ಥಿಯಾಗಿ ನಿಂತಿರೋ ವರುಣಾ ಕ್ಷೇತ್ರದಲ್ಲಿ ಸುಮಾರು 70 ಸಾವಿರಕ್ಕೂ ಹೆಚ್ಚು ಲಿಂಗಾಯತ ಮತಗಳಿವೆ.ಅಲ್ಲಿ ಮತಗಳನ್ನು ಸೆಳೆಯಬೇಕು ಆದ್ರೆ ಈ ರೀತಿಯ ಹೇಳಿಕೆಗಳಿಂದ ಲಿಂಗಾಯತರಿಗೆ ಮಹಾದ್ರೋಹ ಮಾಡ್ತಾ ಇದ್ದೀರಿ.ಈ ತಕ್ಷಣವೇ ಸಿದ್ದರಾಮಯ್ಯ ಅವರೇ ಕ್ಷಮೆ ಕೇಳಿ, ಇಲ್ಲದಿದ್ರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡ್ಬೇಕಾಗುತ್ತೆ.ಇದ್ರಿಂದ ತಕ್ಕದಾದ ಪಾಠವನ್ನು ನೀವು ಕಲಿಯಬೇಕಾಗುತ್ತೆ ಅಂತಾ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕಣವಾಡಿ ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಷಯ ತೃತೀಯ ಹಬ್ಬಕ್ಕೆ ವಿಶೇಷ ರಿಯಾಯಿತಿಯೊಂದಿಗೆ ಆಫರ್