ಸಹದ್ಯೋಗಿ ಮಹಿಳೆಯೊಂದಿಗೆ ಮಾಜಿ ಸೈನಿಕನೊಬ್ಬ ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿ ಬಂದಿದೆ. ಈ ಘಟನೆ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ಸಮೀಪ ಶನಿವಾರ ಸಂಜೆ ಸಂಭವಿಸಿದ್ದು, ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ಕಾವು ಎಂಬಲ್ಲಿರುವ ಕ್ಯಾಂಪ್ಕೋ ಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ನೀಡಿರುವ ದೂರಿನಂತೆ ಅದೇ ಕ್ಯಾಂಪ್ಕೋ ಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ, ಮಾಜಿ ಸೈನಿಕನಾಗಿರುವ ಒಳಮೊಗ್ರು ಗ್ರಾಮದ ಕುಂಬ್ರ ಸಮೀಪದ ಕುರಿಕ್ಕಾರ ರಸ್ತೆ ನಿವಾಸಿ ವಿದೀಪ್ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.ಮಹಿಳೆಯೊಂದಿಗೆ ಅನುಚಿತ ವರ್ತನೆ ಆರೋಪದ ಮೇಲೆ ಮಾಜಿ ಸೈನಿಕ ಬಂಧನಮಹಿಳೆಯೊಂದಿಗೆ ಅನುಚಿತ ವರ್ತನೆ ಆರೋಪದ ಮೇಲೆ ಮಾಜಿ ಸೈನಿಕ ಬಂಧನಸಹದ್ಯೋಗಿಯಾಗಿದ್ದರೂ ಆತ ನನ್ನೊಂದಿಗೆ ವರ್ತಿಸುತ್ತಿದ್ದ ರೀತಿ ನನಗೆ ಇಷ್ಟವಾಗದ ಕಾರಣ ಆತನೊಂದಿಗೆ ತಾನು ಹೆಚ್ಚು ಮಾತನಾಡುತ್ತಿರಲಿಲ್ಲ.
ಕಳೆದ 4 ದಿನಗಳಿಂದ ಸಂಸ್ಥೆಗೆ ಕೆಲಸಕ್ಕೆ ಬರದಿರುವ ಆತ ಶನಿವಾರ ಸಂಜೆ ನಾನು ಕೆಲಸ ಮುಗಿಸಿಕೊಂಡು ತಿಂಗಳಾಡಿ ತನಕ ಬಸ್ನಲ್ಲಿ ತೆರಳಿ ಅಲ್ಲಿಂದ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ತಿಂಗಳಾಡಿ ಕಡೆಯಿಂದ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದು ಕೆದಂಬಾಡಿ ಗ್ರಾಮದ ದರ್ಬ ಎಂಬಲ್ಲಿ ಬೈಕ್ ನಿಲ್ಲಿಸಿ, ಬಳಿಗೆ ಬಂದು ನನ್ನನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಅಸಭ್ಯವಾಗಿ ವರ್ತಿಸಿದ್ದಾನೆ.
ಇದೇ ಸಮಯ ಸ್ಥಳಕ್ಕೆ ಜನರು ಬರುವುದನ್ನು ನೋಡಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮಹಿಳೆ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಸಂಪ್ಯ ಪೊಲೀಸರು ಭಾನುವಾರ ಆರೋಪಿ ವಿದೀಪ್ ಕುಮಾರ್ನನ್ನು ಬಂಧಿಸಿದ್ದಾರೆ.