ಕಾಂಗ್ರೆಸ್ನವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಕರೆಸಿ, ರಾಹುಲ್ ಗಾಂಧಿ ಮುಖ ತೋರಿಸಿ ಜನರ ಬಳಿ ವೋಟ್ ತೆಗೆದುಕೊಳ್ಳಿ ನೋಡೋಣ ಎಂದು ಮಾಜಿ ಸಚಿವ K.S. ಈಶ್ವರಪ್ಪ ಸವಾಲ್ ಹಾಕಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಷ್ಟ್ರದ ಬಿಜೆಪಿ ನಾಯಕರು ಚುನಾವಣಾ ಸಂದರ್ಭದಲ್ಲಿ ರಾಜ್ಯಕ್ಕೆ ಬರುತ್ತಿರೋದೆ ಕಾಂಗ್ರೆಸ್ನವರಿಗೆ ತಳಮಳ ಶುರುವಾಗಿದೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ವಿಶ್ವ ನಾಯಕ ನರೇಂದ್ರ ಮೋದಿ ಅವರು ನಮ್ಮ ನಾಯಕರು ಆಗಿರೋದು ನಮ್ಮ ಹೆಮ್ಮೆ, ಬಿಜೆಪಿ ಸಂಘಟನೆ ಬೂತ್ ಮಟ್ಟದಲ್ಲಿ ಬೆಳೆದಿದೆ.. ಮಾಜಿ ಸಿಎಂ B.S. ಯಡಿಯೂರಪ್ಪ, ಸಿಎಂ ಬಸವರಾಜ್ ಬೊಮ್ಮಾಯಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನ ಮೆಚ್ಚಿದ್ದಾರೆ.. ರಾಜ್ಯದಲ್ಲಿ ಬಿಜೆಪಿ ಈ ಬಾರಿ ಪೂರ್ಣ ಬಹುಮತ ಬರುವ ವಿಶ್ವಾಸ ಇದೆ ಎಂದು ತಿಳಿಸಿದ್ರು. ಇನ್ನು ಬಂಡೀಪುರದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಹುಲಿ ಕಾಣಲಿಲ್ಲ ಎಂಬ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಟೀಕೆ ಮಾಡೋದು ಬಿಟ್ಟರೆ ಕಾಂಗ್ರೆಸ್ನವರಿಗೆ ಏನು ಗೊತ್ತಿದೆ ಹೇಳಿ. ಹುಲಿ ಕಾಣಲಿಲ್ಲ ಅನ್ನೋದು ಒಂದು ಟೀಕೆ.. ಆಕಸ್ಮಾತ್ ಒಂದು ಹುಲಿ ಕಂಡ್ರೆ ಒಂದೇ ಕಾಣಿಸ್ತು ಅಂತಾ ಟೀಕೆ. ಟೀಕೆಯಲ್ಲೇ ಕಾಂಗ್ರೆಸ್ನವರು ಜೀವನ ಕಳೆದುಕೊಂಡು ಬಿಟ್ರು ಎಂದು ಲೇವಡಿ ಮಾಡಿದ್ರು.