Publish Date: Wed, 13 Sep 2017 (20:47 IST)
Updated Date: Wed, 13 Sep 2017 (20:50 IST)
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪೊಲೀಸ್ ಠಾಣೆಯಲ್ಲಿ ಹಿಂದೂ ಮುಖಂಡ ಅರುಣ್ ಪುತ್ತಿಲ ಎಂಬುವವರು ಜಿಗ್ನೇಶ್ ಮೇವಾನಿ ವಿರುದ್ಧ ದೇಶದ್ರೋಹದ ದೂರು ದಾಖಲಿಸಿದ್ದಾರೆ.
ನಿನ್ನೆ ಗೌರಿ ಲಂಕೇಶ ಹತ್ಯೆ ಪ್ರತಿರೋಧ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಗುಜರಾತ್ ಮೂಲದ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಪ್ರಧಾನಿ ಮೋದಿ ಮತ್ತು ಅವರ ತಾಯಿಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗೌರಿ ಲಂಕೇಶ ಹತ್ಯೆ ಪ್ರತಿರೋಧ ಸಮಾವೇಶದಲ್ಲಿ ಭಾಷಣ ಮಾಡಿದ ಜಿಗ್ನೇಶ್ ಮೇವಾನಿ ಗುಜರಾತ್‌ನ ಗಾಂಧಿನಗರಕ್ಕೆ ತೆರಳಿ ಪ್ರಧಾನಿ ಮೋದಿಯ ತಾಯಿಯನ್ನು ಭೇಟಿಯಾಗಿ ಇಂತಹ ನಾಲಾಯಕ್ ಮಗನಿಗೆ ಏಕೆ ಜನ್ಮ ಕೊಟ್ಟಿದ್ದೀಯಾ ಎಂದು ಕೇಳೋಣ. ಇಂತಹ ನೀಚ ಮನಸ್ಸಿನ ವ್ಯಕ್ತಿಯಿಂದ ದೇಶಕ್ಕೆ ಕಳಂಕ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.