Select Your Language

Notifications

webdunia
webdunia
webdunia
webdunia

ಕನ್ನಡ ಬಳಕೆಗೆ ಆಗ್ರಹಿಸಿ ಕನ್ನಡಪರ ಸಂಘಟನೆಯಿಂದ ಕಾಲ್ನಡಿಗೆ ಜಾಥ

bbmp

geetha

bangalore , ಬುಧವಾರ, 28 ಫೆಬ್ರವರಿ 2024 (16:35 IST)
ಬೆಂಗಳೂರು-ಕಳೆದ ಡಿಸೆಂಬರ್ 27 ರಂದು ಶುರುವಾಗಿದ್ದ ಕನ್ನಡಿಗರ ಕಿಚ್ಚಿಗೆ ಮಣಿದ ರಾಜ್ಯ ಸರ್ಕಾರ  ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಕಡ್ಡಾಯಕ್ಕೆ ಗಡುವು ನೀಡಿತ್ತು. ಆದ್ರೆ ಇಂದು ಆ ಗಡುವು ಮುಕ್ತಾಯವಾಗಿದೆ. ಹೀಗಿದ್ರು ಕೂಡ ಕೆಲ ಅಂಗಡಿ ಮುಂಗಟ್ಟುಗಳು ಬಿಟ್ಟರೇ ಬಹುತೇಕರು ಇನ್ನೂ ಆಂಗ್ಲ ಭಾಷೆಯ ನಾಮಫಲಕಗಳೇ ರಾರಾಜಿಸುತ್ತಿವೆ. ಕೆವಲ ಕಾಟಾಚಾರಕ್ಕೆ ಆಂಗ್ಲ ಭಾಷೆಯ ನಾಮಫಲಕಾಗಳ ಮೇಲೆ ಬಟ್ಟೆ ಹಾಕಿ ಮುಚ್ಚಲಾಗಿದೆ. ಇನ್ನು ಬಟ್ಟೆಗಳ ಮೇಲೆ ಕನ್ನಡ ಭಾಷೆಯ ಹೆಸರು ಬರೆಸಿದ್ದಾರೆ. ಇದೆಲ್ಲವೂ ನೋಡಿದಾಗ ಮೊಂಡಾಟ ವಾಡುತ್ತಿರುವ ವ್ಯಾಪಾರಿಗಳಿಂದ ಮತ್ತೊಂದು ರಣ ರೋಚಕ ಕ್ಷಣಕ್ಕೆ ಆಹ್ವಾನ ನೀಡಿದಂತಾಗಿದೆ.
 
ಇಂದು ಕನ್ನಡ ಒಕ್ಕೂಟಗಳಿಂದ ಕನ್ನಡ ಶೇ.೬೦ ರಷ್ಟು ಕನ್ನಡ ಬಳಕೆಗೆ ಆಗ್ರಹಿಸಿ ಕಾಲ್ನಡಿಗೆ ಜಾಥ ನಡೆಸಲಾಯಿತು. ಗಾಂಧಿನಗರದ ಸುತ್ತಮುತ್ತಲಿನ ವಾಣಿಜ್ಯ ಮಳಿಗೆಗಳ‌ ಮಾಲೀಕರಿಗೆ ಕನ್ನಡ ನಾಮಫಲಕಗಳನ್ನ ಹಾಕುವಂತೆ ಸಂಘಟನೆಗಳು ಮನವಿ ಮಾಡಲು ಮುಂದಾದ್ರು. ಆದ್ರೆ ಪೊಲೀಸರು ಅವರನ್ನು ತಡೆ ಹಿಡಿದ್ರು.
 
ಇನ್ನು  ಬ್ರಿಗೇಡ್, ಎಸ್ ಪಿ ರೋಡ್, ಮಲ್ಲೇಶ್ವರಂ ರಸ್ತೆಯಲ್ಲಿ ಆಂಗ್ಲಭಾಷೆಯ ಬೋರ್ಡ್ ರಾರಾಜಿಸುತ್ತಿದೆ. ಕನ್ನಡ ಮಾಯವಾಗಿದೆ. ಕನ್ನಡದಲ್ಲಿ ಬರೆದ ಅಕ್ಷರಗಳು ಮಾಸಿ ಹೋಗಿದ್ದು. ಇದು ಕೂಡ ಕನ್ನಡ ಪರ ಹೋರಾಟಗಾರರನ್ನು ಮತ್ತಷ್ಟು ಕೆರಳಿಸಿದೆ. ಒಂದು ವೇಳೆ ವ್ಯಾಪಾರಿಗಳು ನಾಮಫಲಕ ಬದಲಾವಣೆ ಮಾಡದಿದ್ದರೆ ಹಾಗೂ ನಾಮಫಲಕ ಬದಲಾವಣೆ ಮಾಡದವರ ವಿರುದ್ದ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಮಾರ್ಚ್ 1 ರಿಂದ ಮತ್ತೆ ಉಗ್ರವಾದ ಹೋರಾಟ ಮಾಡುವುದಾಗಿ ಕನ್ನಡ ಪರ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
 
ಕನ್ನಡ ನಾಮಫಲಕ  ವಲಯವಾರು ನೋಟಿಸ್‌ ವಿವರಗಳನ್ನು ನೋಡೋದದ್ರೆ
 
 
• ಬೆಂಗಳೂರು ದಕ್ಷಿಣ ವಲಯ ..
 
- ನೋಟೀಸ್ ಸಂಖ್ಯೆ- 5982.
- ನಾಮಫಲಕ ಬದಲಾವಣೆ - 
5605.
-  ನಾಮಫಲಕ ಬದಲಾವಣೆ ಬಾಕಿ - 377.
 
• ಬೆಂಗಳೂರು ಪೂರ್ವ ವಲಯ-
 
- ನೋಟೀಸ್ ಸಂಖ್ಯೆ- 8634.
- ನಾಮಫಲಕ ಬದಲಾವಣೆ - 8634.
-  ನಾಮಫಲಕ ಬದಲಾವಣೆ ಬಾಕಿ - 0000
 
 
• ಬೊಮ್ಮನಹಳ್ಳಿ ವಲಯ - 
 
- ನೋಟೀಸ್ ಸಂಖ್ಯೆ- 8413.
- ನಾಮಫಲಕ ಬದಲಾವಣೆ - 7730.
-  ನಾಮಫಲಕ ಬದಲಾವಣೆ ಬಾಕಿ -693.
 
 
• ಮಹಾದೇವಪುರ‌ ವಲಯ
 
- ನೋಟೀಸ್ ಸಂಖ್ಯೆ- 5960.
- ನಾಮಫಲಕ ಬದಲಾವಣೆ -  5730.
-  ನಾಮಫಲಕ ಬದಲಾವಣೆ ಬಾಕಿ - 230.
 
 
•  ಪಶ್ಚಿಮ ವಲಯ 
-  ನೋಟೀಸ್ ಸಂಖ್ಯೆ-  7113.
- ನಾಮಫಲಕ ಬದಲಾವಣೆ - 6544.
-  ನಾಮಫಲಕ ಬದಲಾವಣೆ ಬಾಕಿ - 569.
 
• ಯಲಹಂಕ ವಲಯ
 
- ನೋಟೀಸ್ ಸಂಖ್ಯೆ- 6165.
- ನಾಮಫಲಕ ಬದಲಾವಣೆ - 5405.
-  ನಾಮಫಲಕ ಬದಲಾವಣೆ ಬಾಕಿ-760.
 
• ಅರ್ .ಅರ್ ನಗರ ವಲಯ
 
- ನೋಟೀಸ್ ಸಂಖ್ಯೆ-  6401.
- ನಾಮಫಲಕ ಬದಲಾವಣೆ - 5563.
-  ನಾಮಫಲಕ  ಬಾಕಿ-838..
 
• ದಾಸರಹಳ್ಳಿ ವಲಯ
 
- ನೋಟೀಸ್ ಸಂಖ್ಯೆ - 1548.
- ನಾಮಫಲಕ ಬದಲಾವಣೆ - 1399.
- ನಾಮಫಲಕ ಬದಲಾವಣೆ ಬಾಕಿ - 149.
 
•ಒಟ್ಟು 50,216 - 46,600 -3,616.
 
ಇದಿಷ್ಟು ಪಾಲಿಕೆಯಿಂದ ಉದ್ದಿಮೆ ಪರವಾನಗಿ ಪಡೆವರಿಗೆ ಮಾತ್ರ ನೀಡಿರುವ ನೋಟಿಸ್‌.ಉಳಿದಂತೆ ಪರವಾನಗಿ ಪಡೆಯದ ವ್ಯಾಪಾರ ನಡೆಸಲಾಗುತ್ತಿರೋ ವಾಣಿಜ್ಯ ಮಳಿಗೆಗಳ ಮೇಲೆ ಅನ್ಯ ಭಾಷೆಯ ನಾಮಫಲಕ ಇಂದಿಗೂ ಇವೆ. ಅವುಗಳ ಮೇಲೆ ಯಾವಾಗ ಬಿಬಿಎಂಪಿ ಕ್ರಮ  ಕೈಗೊಳ್ಳುತ್ತೋ ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಲಾಕ್ ಮಾಡಿ ಕೀ ಶೂ ನಲ್ಲಿ ಇಟ್ಟು ಹೋಗ್ತೀರಾ? ಹಾಗಾದ್ರೆ ತಪ್ಪದೆ ಈ ಸ್ಟೋರಿ ನೋಡಿ