Select Your Language

Notifications

webdunia
webdunia
webdunia
webdunia

ಲಹರಿ ಸಂಸ್ಥೆಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ

ಲಹರಿ ಸಂಸ್ಥೆಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ
bangalore , ಸೋಮವಾರ, 4 ಏಪ್ರಿಲ್ 2022 (20:10 IST)
ರಿಕ್ಕಿ ಕೇಜ್ ಮತ್ತು ಅಮೆರಿಕದ ರಾಕ್ ಲೆಜೆಂಡ್ ಸ್ಟೀವರ್ಟ್ ಕೋಪ್ಲೆಂಡ್ ಜಂಟಿಯಾಗಿ ಸಂಯೋಜಿಸಿ, ಹಾಡಿರುವ ಡಿವೈನ್ ಟೈಡ್ಸ್  ಆಲ್ಬಂ ವಿಶ್ವದ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದೆ. ನ್ಯೂ ಏಜ್ ಆಲ್ಬಂ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದ್ದ ಡಿವೈನ್ ಟೈಡ್ಸ್ ಆಲ್ಬಂ ಎಂಟು ಹಾಡುಗಳನ್ನು ಒಳಗೊಂಡಿದ್ದು, ಇದನ್ನು ಕನ್ನಡದ ಹೆಮ್ಮೆಯ ಆಡಿಯೋ ಸಂಸ್ಥೆ ಲಹರಿ ಸಂಸ್ಥೆ ನಿರ್ಮಾಣ ಮಾಡಿತ್ತು. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ರಿಕ್ಕಿ ಕೇಜ್ ಸಂಯೋಜಿಸಿದ್ದರು. ಸಂಗೀತ ಲೋಕದಲ್ಲಿ ಸಾಧನೆ ಮಾಡಿದವರಿಗೆ ಕೊಡುವ ಪ್ರಶಸ್ತಿ ಗ್ರಾಮಿ ಅವಾಡ್ರ್ಸ್ ಆಗಿದ್ದು, ಲಹರಿ ಸಂಸ್ಥೆ ಇದೇ ಮೊದಲ ಬಾರಿಗೆ ಗ್ರಾಮಿ ಪ್ರಶಸ್ತಿ ಪಡೆದ ಸಂತಸದಲ್ಲಿದ್ದರೆ, ರಿಕ್ಕಿ ಅವರು ಎರಡನೇ ಬಾರಿಗೆ ಗ್ರಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಬನ್ನಂಜೆ ರಾಜಾಗೆ ಜೀವಾವಧಿ ಶಿಕ್ಷೆ