Select Your Language

Notifications

webdunia
webdunia
webdunia
webdunia

ಬನ್ನಂಜೆ ರಾಜಾಗೆ ಜೀವಾವಧಿ ಶಿಕ್ಷೆ

ಉದ್ಯಮಿ ಆರ್.ಎನ್. ನಾಯಕ್ ಹತ್ಯೆ
ಉದ್ಯಮಿ ಆರ್.ಎನ್. ನಾಯಕ್ ಹತ್ಯೆ ಪ್ರಕರಣ ಸಂಬಂಧ ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ ನಾಲ್ವರಿಗೆ ಬೆಳಗಾವಿಯ ಕೋಕಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಬೆಳಗಾವಿಯ ಕೋಕಾ ನ್ಯಾಯಾಲಯ ಇಂದು ತೀರ್ಪು ಪ್ರಕಟಸಿದ್ದು, A-2 ಉತ್ತರ ಪ್ರದೇಶ ಮೂಲದ ಜಗದೀಶ್ ಪಟೇಲ್, A-3 ಬೆಂಗಳೂರಿನ ಅಭಿ ಬಂಡಗಾರ್, A-4 ಉಡುಪಿಯ ಗಣೇಶ್ ಭಜಂತ್ರಿ, A-9 ಉಡುಪಿಯ ಬನ್ನಂಜೆ ರಾಜಾಗೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾದಲ್ಲಿ 2013ರ ಡಿಸೆಂಬರ್ 21 ರಂದು ಉದ್ಯಮಿ ನಾಯಕ್ ಹತ್ಯೆಯಾಗಿತ್ತು. 3 ಕೋಟಿ ಹಫ್ತಾ ನೀಡದಿದ್ದಕ್ಕೆ ಆರ್.ಎನ್. ನಾಯಕ್ ಹತ್ಯೆ ಮಾಡಲಾಗಿತ್ತು. ಈ ಹಿನ್ನೆಲೆ, ಬನ್ನಂಜೆ ರಾಜಾ ಸೇರಿ ನಾಲ್ಕು ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಂ ಶಿಲ್ಪಿಗಳನ್ನು ಯಾವಾಗ ಬಹಿಷ್ಕರಿಸುತ್ತೀರಾ?