Select Your Language

Notifications

webdunia
webdunia
webdunia
webdunia

ಕೋಟ್ಯಂತರ ಮೌಲ್ಯದ ಶೂ ಬೆಂಕಿಗಾಹುತಿ

multi-million dollar shoe
bangalore , ಮಂಗಳವಾರ, 19 ಸೆಪ್ಟಂಬರ್ 2023 (19:22 IST)
ಬೆಂಗಳೂರು ಹೊರ ವಲಯದಲ್ಲಿರುವ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ತಡರಾತ್ರಿ ಶೂ, ಚಪ್ಪಲಿ ಗೋಡೌನ್​ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಐದು ಕೋಟಿಗೂ ಅಧಿಕ ಮೌಲ್ಯದ ಶೂಗಳು ಹಾಗೂ ಚಪ್ಪಲಿಗಳು ಸುಟ್ಟು ಭಸ್ಮವಾಗಿವೆ. ಗೋಡೌನ್​ ಬಳಿಯ ವಿದ್ಯುತ್ ಕಂಬಕ್ಕೆ ಕ್ಯಾಂಟರ್​ ಡಿಕ್ಕಿ ಹೊಡೆದಿದೆ. ಈ ವೇಳೆ ಉತ್ತರಹಳ್ಳಿ ನಿವಾಸಿ ಶ್ರೀನಿವಾಸ್ ಎಂಬುವವರಿಗೆ ಸೇರಿದ ASR MARKETING ಮತ್ತು UNICORN MARKETING ಎಂಬ ಹೆಸರಿನ ಗೋಡೌನ್​​ಗೆ ಸಂಪರ್ಕಿಸಿದ್ದ ವಿದ್ಯುತ್ ​​​ತಂತಿಯಿಂದ ಶಾರ್ಟ್​ಸರ್ಕ್ಯೂಟ್ ಉಂಟಾಗಿ ಈ ಅವಘಡ ಸಂಭವಿಸಿದೆ. ಗೋಡೌನ್​ನಲ್ಲಿ 100ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದರು. ಆದರೆ ಅಗ್ನಿ ಅವಘಡದಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಮಾಹಿತಿ ತಿಳಿಯುತ್ತಿದ್ದಂತೆ 7ಕ್ಕೂ ಹೆಚ್ಚು ಅಗ್ನಿಶಾಮಕ ದಳ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಗೋಡೌನ್ ಸ್ಥಿತಿ ಕಂಡು ಮಾಲೀಕ ಶ್ರೀನಿವಾಸ್ ಕಣ್ಣೀರು ಹಾಕಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕೆಂಗೇರಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತೆರಿಗೆ ಸಂಗ್ರಹದಲ್ಲಿ ರಾಜ್ಯ ನಂ.1