Select Your Language

Notifications

webdunia
webdunia
webdunia
webdunia

ಇಂದು ಶೂನ್ಯ ನೆರಳು ದಿನ- ಹಿರಿಯ ವಿಜ್ಞಾನಿ ಡಾ. ಆನಂದ

ಇಂದು ಶೂನ್ಯ ನೆರಳು ದಿನ- ಹಿರಿಯ ವಿಜ್ಞಾನಿ ಡಾ. ಆನಂದ
bangalore , ಶುಕ್ರವಾರ, 18 ಆಗಸ್ಟ್ 2023 (16:31 IST)
ವಿಜ್ಞಾನದಲ್ಲಿ ಒಂದಲ್ಲ ಒಂದು ವಿಸ್ಮಯಗಳನ್ನು ನೋಡ್ತಾನೆ ಇರ್ತೀವಿ. ಇಂದು ಕೂಡ ಅಂತಹದ್ದೆ ಒಂದು ವಿಸ್ಮಯಕ್ಕೆ ಸಿಲಿಕಾನ್ ಸಿಟಿ ಸಾಕ್ಷಿಯಾಯಿತು.ಕಷ್ಟ ಇರಲಿ ಸುಖ ಇರಲಿ ಸದಾ ನಮ್ಮ ಜೊತೆಗಿರುವ ಜೊತೆಗಾರ.. ಹಿಂದೆ ಹೋದ್ರೂ.. ಮುಂದೆ ಹೋದ್ರೂ ಸದಾ ನಮ್ಮ ಬೆನ್ನು ಹಿಂದೆ ಇರೋದು ಅಂದ್ರೆ ಅದು ನಮ್ಮ ನೆರಳು. ಆದ್ರೆ ಇವತ್ತು ಆ ನಮ್ಮ ಜೊತೆಗಾರನೆ ಮಾಯವಾಗಿದ್ದ. ಹೌದು ಇಂದು ಬಿಸಿಲು ಇದ್ದರೂ ಕೆಲವು ಕ್ಷಣಗಳ ವರೆಗೆ ಜನರು ತಮ್ಮ ನೆರಳುಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಇಂದು ಶೂನ್ಯ ನೆರಳಿನ ದಿನ. ಸೂರ್ಯನ ಕಿರಣಗಳು ನೆತ್ತಿಯ ಮೇಲೆ ಬೀಳುವಾಗ ಅಂದರೆ ಸರಿಸುಮಾರು ಮದ್ಯಾಹ್ನದ 12.24 ರ ಸಮಯದಲ್ಲಿ ಝೀರೋ ಶ್ಯಾಡೋ ಡೇ ಎಂಬ ಕುತೂಹಲಕಾರಿ ಖಗೋಳ ವಿಸ್ಮಯಕ್ಕೆ ಸಾಕ್ಷಿಯಾಯಿತು.

ಸೂರ್ಯಗ್ರಹಣ, ಚಂದ್ರಗ್ರಹಣ ಸೇರಿದಂತೆ ಹಲವು ಖಗೋಳ ವಿಸ್ಮಯಗಳು ನಡೆಯುತ್ತಿರುತ್ತವೆ. ಇಂದು ಬೆಂಗಳೂರಿನಲ್ಲಿ ಮಧ್ಯಾಹ್ನದ ಸಮಯದಲ್ಲಿ ಶೂನ್ಯ ನೆರಳಿನ ದಿನಕ್ಕೆ ಸಾಕ್ಶಿಯಾಗಿದೆ. ಶೂನ್ಯ ನೆರಳಿನ ದಿನ ಎಂದರೆ ನಮ್ಮ ನೆರಳು ನಮಗೆ ಕಾಣಿಸದಿರೋದು. ಇನ್ನು ವರ್ಷಕ್ಕೆ ಎರಡು ಬಾರಿ ಮಾತ್ರ ಈ ವಿಶೇಷ ಖಗೋಳ ವಿಸ್ಮಯ ನಡೆಯುತ್ತಂತೆ. ಮಧ್ಯಾಹ್ನ 12 ರಿಂದ 1 ಗಂಟೆಯ ನಡುವೆ ಸುಮಾರು ಒಂದುವರೆ ನಿಮಿಷಗಳ ಕಾಲ ಯಾವುದೇ ನೆರಳು ಕಾಣಿಸೋದಿಲ್ಲವಂತೆ. ಶೂನ್ಯ ನೆರಳು ದಿನವು ವರ್ಷಕ್ಕೆ ಎರಡು ಬಾರಿ ಬರುತ್ತದೆ. ಒಂದು ಸೂರ್ಯ ಉತ್ತರದ ಕಡೆಗೆ ಚಲಿಸಿದಾಗ ಬಂದ್ರೆ, ಇನ್ನೊಂದು ಸೂರ್ಯ ದಕ್ಷಿಣಕ್ಕೆ ಚಲಿಸಿದಾಗ ಬರುತ್ತದೆ. ಈ ಬಾರಿಯು ಮೊದಲನೆಯದಾಗಿ ಶೂನ್ಯ ನೆರಳು ಏಪ್ರಿಲ್ 25 ರಂದು ನದೆದಿತ್ತು. ಎರಡನೆಯದು ಇಂದು ಸಂಭವಿಸಿದೆ. ವಿಜ್ಞಾನಿಗಳ ಪ್ರಕಾರ ನಮ್ಮ ದೇಶದಲ್ಲಿ ಕರ್ಕಾಟಕ ಮತ್ತು ಮಕರ ಸಂಕ್ರಾತಿಯ ನಡುವೆ ಬರುವ ಸ್ಥಳಗಳಲ್ಲಿ ಅಥವಾ ನಗರಗಳಲ್ಲಿ ಈ ವಿಸ್ಮಯ ನಡೆಯುತ್ತಂತೆ. ಇನ್ನು ಎ.ಎಸ್.ಐ ಪ್ರಕಾರ ಪ್ರಕಾರ ಶೂನ್ಯ ನೆರಳು ದಿನವು ಪ್ಲಸ್ 23.5 ಮತ್ತು ಮೈನಸ್ 23.5 ಡಿಗ್ರಿ ಆಕ್ಷಾಂಶದ ನಡುವಿನ ಸ್ಥಳದಲ್ಲಿ ವರ್ಷಕ್ಕೆ ಎರಡು ಬಾರಿ ನಡೆಯುತ್ತಂತೆ. ಇನ್ನು  ಬೆಂಗಳೂರು ಮಾತ್ರವಲ್ಲದೆ ಮಂಗಳೂರು, ಬಂಟ್ವಾಳ, ಸಕಲೇಶಪುರ, ಹಾಸನ, ಬಿಡದಿ, ದಾಸರಹಳ್ಳಿ, ಬಂಗಾರಪೇಟೆ, ಕೋಲಾರ, ವೆಲ್ಲೂರು, ಚೆನ್ನೈ, ಶ್ರೀಪೆರಂಬದೂರು, ತಿರುವಳ್ಳೂರು ಮುಂತಾದೆಡೆ ಈ ವಿಸ್ಮಯಕ್ಕೆ ಸಾಕ್ಷಿಯಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಟ್ರಾಫಿಕ್ ಜಾಮ್ ನಿಂದಾ ಬೆಂಗಳೂರಿಗೆ 19 ಸಾವಿರ ಕೋಟಿ ನಷ್ಟ...!