Publish Date: Tue, 14 Apr 2026 (19:14 IST)
Updated Date: Tue, 14 Apr 2026 (19:40 IST)
ಬೆಂಗಳೂರು: ಬೆಳೆದು ನಿಂತ ಮಗಳನ್ನು ಕೊಂದು ತಾಯಿಯು ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆ ವೈಟ್‌ಫೀಲ್ಟ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. 17 ವರ್ಷದ ಮಗಳನ್ನು ಕೊಂದು 40ವರ್ಷದ ತಾಯಿ ಕೂಡಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
40 ವರ್ಷದ ಸುವರ್ಣ ಮಗಳನ್ನ ಕೊಲೆ ಮಾಡಿ ಆತ್ಮಹತ್ಯೆ ಶರಣಾಗಿರುವ ತಾಯಿ.
ಇನ್ನೂ ತನ್ನ ತಾಯಿಯಿಂದಲೇ ಕೊಲೆಯಾದ ಮಗಳನ್ನು ಕಾರುಣ್ಯ ಎಂದು ಗುರುತಿಸಲಾಗಿದೆ.
ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ವೈಟ್‌ಫೀಲ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.